ನೊಯ್ಡಾ:– ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಇಂದು ಸಂಭವಿಸಿದ ಸ್ಫೋಟದಲ್ಲಿ ಓರ್ವ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮನೆಯೊಂದರಲ್ಲಿ ಜರುಗಿದೆ.
ಕುಡಿದ ಮತ್ತಲ್ಲಿ ಮೆಟ್ರೋದಲ್ಲಿ ಪುಂಡಾಟ: ಯುವಕರನ್ನು ಬಂಧಿಸಿದ ಪೊಲೀಸ್!
ರಾಗದ್ಗಂಜ್ ಗ್ರಾಮದ ಮೊಹಮ್ಮದ್ ಫಾರೂಕ್ ಅವರ ನಿವಾಸದಲ್ಲಿ ಪಟಾಕಿ ತಯಾರಿಸುತ್ತಿದ್ದ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಆಕಾಶ್ ಮತ್ತು ಲಲ್ಲು ಮೃತರು ಎಂದು ಗುರುತಿಸಲಾಗಿದೆ. ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಆಕಾಶ್ ಮತ್ತು ಲಲ್ಲು ಮೃತಪಟ್ಟರೆ, ಇತರ ಮೂವರಾದ ಇಶ್ತಿಯಾಕ್, ಅಯಾಸ್ ಮತ್ತು ಕೃಷ್ಣ ಕುಮಾರ್ ಗಾಯಗೊಂಡಿದ್ದಾರೆ. ಇನ್ನುಳಿದ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಉತ್ತಮ ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಗಿದೆ.
ಫಾರೂಕ್ ಪಂಜಾಬ್ನಲ್ಲಿ ವಾಸಿಸುತ್ತಿದ್ದರು. ಮನೆಯ ಮಾಲೀಕರು ಪಂಜಾಬ್ನ ಜಲಂಧರ್ನಲ್ಲಿ ವಾಸಿಸುತ್ತಿದ್ದು, ಸ್ಫೋಟ ಸಂಭವಿಸಿದಾಗ ಕೆಲವರು ಪಟಾಕಿಗಳನ್ನು ತಯಾರಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ರಾಜ್ಜನ್ ಬಾಬಾ ಹೇಳಿದ್ದಾರೆ.