ಮಹದೇವಪುರ: ಮೈಸೂರಿನಂತೆ ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಜೈಶ್ರೀರಾಮ್ ಸೇವಾ ಸಮಿತಿ ವತಿಯಿಂದ ಮೂರನೇ ವರ್ಷದ ದಸರಾ ಮಹೋತ್ಸವ ಅದ್ದೂರಿಯಾಗಿ ನೇರವೇರಲಿದೆ ಎಂದು ಸಮಿತಿ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ತಿಳಿಸಿದರು.
ಕುಮಾರಸ್ವಾಮಿ ಜ್ಯೋತಿಷ್ಯರಾ!? ಹಾಗಿದ್ರೆ ನಾವು ಕೇಳ್ತಿವಿ: ಚಲುವರಾಯಸ್ವಾಮಿ ವ್ಯಂಗ್ಯ!
ಇದೇ ಅಕ್ಟೋಬರ್ 8 ರಿಂದ ಐದು ದಿನಗಳ ಕಾಲ ಅದ್ದೂರಿ ಮಹೋತ್ಸವ ನೇರವೇರಲಿದ್ದು, 500 ಕ್ಕೂ ಮಾತೆಯರು ಕಳಶ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆ ಮೂಲಕ ಬಂದು ದುರ್ಗಾ ದೇವರ ಪ್ರತಿಷ್ಠಾಪನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ವರ್ತೂರಿನಲ್ಲಿ ನಡೆಯುವ ಉತ್ಸವ ಕರ್ನಾಟಕ
ರಾಜ್ಯದಲ್ಲೆ ಹೆಸರಾಗುವ ರೀತಿಯಲ್ಲಿ ಉತ್ಸವ ಮಾಡಲಾಗುವುದು,ಈ ಉತ್ಸವ ವಿವಿಧೆಡೆ ಮಾಡುವ ಉತ್ಸವ ಗಳಿಗೆ ಮಾದರಿಯಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಪ್ರತಿದಿನ ಕಾರ್ಯಕ್ರಮದ ಮೆರೆಗನ್ನ ಹೆಚ್ಚಿಸಲು ವಿವಿಧ ಕ್ಷೇತ್ರದ ಪ್ರಮುಖರನ್ನ ಕರೆಸಲಾಗುವುದು, ಸಚಿವರಾದ ರಾಮಲಿಂಗ ರೆಡ್ಡಿ, ಶಿವರಾಜ್ ತಂಗಡಗಿ,ಚಲನಚಿತ್ರ ನಟ ನಟಿಯರು, ಹಾಸ್ಯ ಕಲಾವಿದರು, ಸರಿಗಮಪ ಸ್ಪರ್ಧಿಗಳು, ಚಲನಚಿತ್ರ ಗಾಯಕ ಗಾಯಕಿಯರು,ಬಿಗ್ ಬಾಸ್ ಸ್ಪರ್ಧಿಗಳು ಉತ್ಸವಕ್ಕೆ ಮೆರಗು ನೀಡಲಿದ್ದಾರೆ ಎಂದು ಹೇಳಿದರು.
ಉತ್ಸವಕ್ಕೆ ವರ್ತೂರು ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಆಗಮಿಸಿ ದೇವರ ಕೃಪೆಗೆ ಪಾತ್ರ ರಾಗಲು ಮನವಿ ಮಾಡಿದರು,ಮನೆ ಮಂದಿಗೆ ಐದು ದಿನಗಳ ಕಾಲ ಸಂಪೂರ್ಣ ಮನರಂಜನೆ ವ್ಯವಸ್ಥೆ ಯನ್ನು ಜೈಶ್ರೀರಾಮ್ ಸೇವಾ ಸಮಿತಿ
ಪದಾಧಿಕಾರಿಗಳು ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೈಶ್ರೀರಾಮ್ ಸೇವಾ ಸಮಿತಿ ಪದಾಧಿಕಾಗಳು ಇದ್ದರು.