ಬೆಂಗಳೂರು:- ಫುಡ್ ಪಾಯ್ಸನ್ನಿಂದ 5 ವರ್ಷದ ಧೀರಜ್ ಸಾವನ್ನಪ್ಪಿದ್ದು, ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿರುವ ಘಟನೆ ಬೆಂಗಳೂರಿನ ಕೆ.ಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿ ಜರುಗಿದೆ.
ಜೈಲಿನಿಂದ ಮುರುಘಾಶ್ರೀಗೆ ಬಿಡುಗಡೆ ಭಾಗ್ಯ: ಬೆಂಬಲಿಗರಿಂದ ಸಂಭ್ರಮಾಚರಣೆ!
ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ. ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅಸ್ವಸ್ಥ ಬಾಲರಾಜ್ಗೆ ನಿನ್ನೆ ಸಂಜೆ ಕೇಕ್ ಆರ್ಡರ್ ಬಂದಿತ್ತು. ಬೇಕರಿಯಿಂದ ಕೇಕ್ ತೆಗೆದುಕೊಂಡು ಹೋಗುವಷ್ಟರಲ್ಲಿ ಆರ್ಡರ್ ಕ್ಯಾನ್ಸಲ್ ಆಗಿದೆ. ಈ ಹಿನ್ನಲೆ ಬಾಲರಾಜ್ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದಾನೆ. ಅದರಂತೆ ಇಡೀ ಕುಟುಂಬ ಅದನ್ನು ಸೇವಿಸಿದ್ದರು.
ಕೇಕ್ ತಿಂದ ಬಳಿಕ ಮಗು, ಪೋಷಕರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಬಗ್ಗೆ ವಿವರ ನೀಡಬೇಕಾದ ತಂದೆ-ತಾಯಿ ಕೂಡ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ಪೊಲೀಸರಿಗೆ ದೂರು ಕೊಡಲು ಅಥವಾ ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಹೇಳಲು ಯಾರು ಇಲ್ಲ. ಇಬ್ಬರಿಗೂ ಪ್ರಜ್ಞೆ ಬಂದ ಬಳಿಕ ಘಟನೆ ಬೆಳಕಿಗೆ ಬರುವ ಸಾಧ್ಯತೆಯಿದೆ.