ಭಾರತದ ಬದ್ಧ ವೈರಿ ಪಾಕಿಸ್ತಾನದ ಹೆಸರಿನಲ್ಲಿದ್ದ ಶ್ರೇಷ್ಟವಾದ ವಿಶ್ವದಾಖಲೆ ಸರಿಗಟ್ಟುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.
ಗ್ಯಾಸ್ ಸಿಲಿಂಡರ್ ವಿಷ್ಯದಲ್ಲಿ ಹುಡುಗಾಟಿಕೆ ಬೇಡ! ಇಲ್ಲಾಂದ್ರೆ ಪ್ರಾಣಕ್ಕೆ ಅಪಾಯ!
ಟೀಮ್ ಇಂಡಿಯಾವು ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಸಹ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಪ್ಲೇಯರ್ಗಳನ್ನು ಕಣಕ್ಕಿಳಿಸುವ ಮೂಲಕ.
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. 2006 ರಿಂದ 2024 ರವರೆಗೆ ಪಾಕಿಸ್ತಾನ್ ತಂಡವು ಟಿ20 ಕ್ರಿಕೆಟ್ನಲ್ಲಿ ಒಟ್ಟು 116 ಆಟಗಾರರನ್ನು ಕಣಕ್ಕಿಳಿಸಿ ದಾಖಲೆ ಬರೆದಿತ್ತು. ಇದೀಗ ಈ ದಾಖಲೆಯ ಸಂಖ್ಯೆಯನ್ನು ಟೀಮ್ ಇಂಡಿಯಾ ಹಿಂದಿಕ್ಕಿದೆ.
ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮಯಾಂಕ್ ಯಾದವ್ ಹಾಗೂ ನಿತೀಶ್ ರೆಡ್ಡಿ ಪಾದಾರ್ಪಣೆ ಮಾಡಿದ್ದರು. ಈ ಇಬ್ಬರ ಎಂಟ್ರಿಯೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಆಟಗಾರರನ್ನು ಕಣಕ್ಕಿಳಿಸಿದ ಕೀರ್ತಿ ಭಾರತದ ಪಾಲಾಗಿದೆ.
2006 ರಿಂದ ಈವರೆಗೆ 236 ಟಿ20 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ಒಟ್ಟು 117 ಆಟಗಾರರಿಗೆ ಅವಕಾಶ ನೀಡಿದೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಆಟಗಾರರನ್ನು ಆಡಿಸಿದ ವಿಶ್ವ ದಾಖಲೆಯನ್ನು ಭಾರತ ತಂಡ ತಮ್ಮದಾಗಿಸಿಕೊಂಡಿದೆ