ಬೆಂಗಳೂರು: ದೊಡ್ಡವರನ್ನ ಮಕ್ಕಳು ಅನುಕರಣೆ ಮಾಡ್ತಾರೆ. ದೊಡ್ಡವರು ಏರಿಯಾದಲ್ಲಿ ಗಲಾಟೆ ಹೊಡೆದಾಟ ಅಂತ ಮಾಡೋದನ್ನ ನೋಡಿ ಮಕ್ಕಳು ಅದನ್ನೆ ಕಲಿತಿದ್ದಾರೆ.
ಪಕ್ಕದ ಬೀದಿ ಹುಡುಗ ತಮ್ಮ ಬೀದಿಗೆ ಬಂದ ಅಂತ ಮೂರ್ನಾಲ್ಕು ಜನ ಹುಡುಗರು ಒಬ್ಬನನ್ನ ಅಟ್ಟಾಡಿಸಿಕೊಂಡು ಹೋಗ್ತಾರೆ ಅದ್ರಲ್ಲಿ ಒಬ್ವ ಮಾಳುದ್ದದ ಚಾಕು ಹಿಡಿದು ಅಟ್ಟಾಡಿಸಿಕೊಂಡು ಹೋಗಿದ್ದಾನೆ. ಚಾಕು ಹಿಡಿದು ಅಟ್ಟಾಡಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬ್ಯಾಟರಾಯನಪುರ ಠಾಣವ್ಯಾಪ್ತಿಯ ಶ್ಯಾಮಣ್ಣ ಗಾರ್ಡನ್ ನಲ್ಲಿ ನೆನ್ನೆ ರಾತ್ರಿ ನಡೆಸಿರೋ ಘಟನೆ ಇದಾಗಿದೆ. ಇನ್ನು ಈ ಹುಡುಗರೆಲ್ಲ 10-12ವರ್ಷದ ಮಕ್ಕಳಾಗಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಮಾತಿನ ಹಾಗೆ ಈ ಮಕ್ಕಳು ಈಗಲೇ ಕೈಯಲ್ಲಿ ಚಾಕು ಹಿಡಿದು ಓಡಾಡಿದ್ರೆ ಮುಂದೆ ಗತಿ ಏನು ಅನ್ನೋ ಆತಂಕ ಮುಡುತ್ತೆ. ಇನ್ನೂ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.