ಗಾಝಾ ಮತ್ತು ಮಧ್ಯ ಪ್ರಾಚ್ಯದಲ್ಲಿ ಮುಂದುವರಿದಿರುವ ರಕ್ತಪಾತ ಕೊನೆಗೊಳ್ಳಬೇಕು ಮತ್ತು ಕದನ ವಿರಾಮ ಒಪ್ಪಂದ ಆಗಬೇಕು ಎಂದು ಆಗ್ರಹಿಸಿ ವಿಶ್ವದಾದ್ಯಂತ ಪ್ರಮುಖ ನಗರಗಳಲ್ಲಿ ಸಾವಿರಾರು ಮಂದಿ ಪ್ರತಿಭಟನಾ ಜಾಥಾ ನಡೆಸಿದರು.
ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್–ಹಮಾಸ್ ಯುದ್ಧ ಆರಂಭಗೊಂಡಿದ್ದು ಒಂದು ವರ್ಷ ಕಳೆದಿದೆ. ಘಟನೆಯಲ್ಲಿ ಸಾಕಷ್ಟು ಮಂದಿ ಮೃತಪಟ್ಟಿದ್ದರು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಮಧ್ಯ ಲಂಡನ್ನಲ್ಲಿ ಸುಮಾರು 40,000 ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಜಾಥಾ ನಡೆಸಿದರೆ, ಬರ್ಲಿನ್, ಪ್ಯಾರಿಸ್, ರೋಮ್, ಜಕಾರ್ತ, ಮನಿಲಾ, ಕೇಪ್ಟೌನ್ ಮತ್ತು ನ್ಯೂಯಾರ್ಕ್ ಸಿಟಿಯಲ್ಲಿಯೂ ಫೆಲೆಸ್ತೀನ್ ಪರ ಜಾಥಾ ನಡೆದಿದೆ.
ಗಾಝಾ ಮತ್ತು ಲೆಬನಾನ್ನಲ್ಲಿ ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕದ ಬೆಂಬಲವನ್ನು ವಿರೋಧಿಸಿ ವಾಷಿಂಗ್ಟನ್ನಲ್ಲಿ ಶ್ವೇತಭವನದ ಎದುರು ಪ್ರತಿಭಟನೆ ನಡೆಸಲಾಗಿದೆ.
ನ್ಯೂಯಾರ್ಕ್ ಸಿಟಿಯ ಟೈಮ್ಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಗಾಝಾ ಮತ್ತು ಲೆಬನಾನ್ ಜನರನ್ನು ಬೆಂಬಲಿಸಿ ಘೋಷಣೆ ಕೂಗಿದ್ದು ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧವನ್ನು ಒತ್ತಾಯಿಸುವ ಬ್ಯಾನರ್ ಪ್ರದರ್ಶಿಸಲಾಗಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಹತ್ಯೆ ಮಾಡಿ ಸುಮಾರು 250 ಜನರನ್ನು ಒತ್ತೆಯಾಳಾಗಿ ಇರಿಸಿಕೊಂ”’,”5″ಡಿದ್ದರು. ಇದಕ್ಕೆ ಪ್ರತೀಕಾರವಾಗಿ ಗಾಝಾದ ಮೇಲೆ ಇಸ್ರೇಲ್ ಆರಂಭಿಸಿದ ಆಕ್ರಮಣ ಒಂದು ವರ್ಷದಿಂದ ಮುಂದುವರಿದಿದ್ದು ಸುಮಾರು 42,000 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 2.3 ದಶಲಕ್ಷ ಜನರನ್ನು ಸ್ಥಳಾಂತರಿಸಿದೆ. ಜತೆಗೆ ಆಹಾರದ ಬಿಕ್ಕಟ್ಟಿಗೆ ಕಾರಣವಾಗಿದೆ.
ಈ ಮಧ್ಯೆ ಇಸ್ರೇಲ್ ವಿರುದ್ಧ ಜಾಗತಿಕ ನ್ಯಾಯಾಲಯದಲ್ಲಿ ನರಮೇಧದ ಪ್ರಕರಣ ದಾಖಲಾಗಿದೆ. ದುರದೃಷ್ಟವಶಾತ್ ನಮ್ಮ ಕಳಕಳಿಯ ಮನವಿಯನ್ನು ಇಸ್ರೇಲ್ ಕಡೆಗಣಿಸುತ್ತಿದೆ ಮತ್ತು ಗಾಝಾದಲ್ಲಿ ದೌರ್ಜನ್ಯವನ್ನು ಮುಂದುವರಿಸಿದೆ. ಈಗ ಲೆಬನಾನ್ ಮತ್ತು ಯೆಮನ್ನಲ್ಲಿ, ಬಹುಷಃ ಇರಾನ್ನಲ್ಲಿ ಕೂಡಾ ಇಸ್ರೇಲ್ನ ಆಕ್ರಮಣ ನಡೆಯಬಹುದು ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದ್ದಾರೆ.