ಮೊದಲ ವಾರದಲ್ಲೇ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ ಜಗದೀಶ್ ಅವರು ಬದಲಾಗುತ್ತೀನಿ ಎನ್ನುವ ಮುನ್ಸೂಚನೆ ಕೊಟ್ಟಿದ್ದಾರೆ.
ಲಾಡ್ಜ್ ನಲ್ಲಿ ನೇಣಿಗೆ ಶರಣು: ಸರ್ಕಾರಿ ಶಾಲಾ ಶಿಕ್ಷಕನ ಆತ್ಮಹತ್ಯೆಗೆ ಕಾರಣ!?
ಮೊದಲ ವಾರದಲ್ಲೇ ಜಗದೀಶ್ ಮಾಡಿದ ಅವಾಂತರಗಳು ಒಂದೆರಡಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಇರುವ ಮಹಿಳಾ ಸ್ಪರ್ಧಿಗಳಿಗೆ ಕಿರಿಕಿರಿ ಆಗುವ ರೀತಿಯಲ್ಲಿ ಪದ ಪ್ರಯೋಗ ಮಾಡಿದ್ದರು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ಅವರು ಕ್ಯಾಮೆರಾ ಎದುರಿನಲ್ಲೇ ಮಾತನಾಡಿದರು. ಬೇಕುಬೇಕಂತಲೇ ನಿಯಮಗಳನ್ನು ಮುರಿದ್ದರು. ಅದಕ್ಕೆಲ್ಲ ಸುದೀಪ್ ಕ್ಲಾಸ್ ತೆಗೆದುಕೊಂಡರು.
ಭಾನುವಾರದ ಸಂಚಿಕೆಯಲ್ಲಿ ಧನರಾಜ್ ಜೊತೆ ಜಗದೀಶ್ ಮಾತನಾಡುತ್ತಿದ್ದರು. ‘ಇನ್ಮೇಲೆ ನಾನು ಕೋಪ ಮಾಡಿಕೊಳ್ಳುವುದೇ ಇಲ್ಲ. ಸುದೀಪ್ ಅವರು ಅಷ್ಟೆಲ್ಲ ನನಗೆ ಹೇಳಿದ್ದಾರೆ. ಅಷ್ಟು ದೊಡ್ಡ ವ್ಯಕ್ತಿ ಹೇಳಿದ್ದಕ್ಕೆ ಗೌರವ ನೀಡುತ್ತೇನೆ’ ಎಂದು ಜಗದೀಶ್ ಹೇಳಿದ್ದಾರೆ.
ಲಾಯರ್ ಎಂದು ಹೇಳಿಕೊಂಡಿರುವ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಕೋಪ ಮಾಡಿಕೊಂಡು ಸುದ್ದಿ ಆಗಿದ್ದಾರೆ. ಅವರ ಕೋಪದಿಂದಾಗಿ ಅನೇಕ ಜಗಳಗಳು ಆಗಿವೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಜಗದೀಶ್ಗೆ ಬುದ್ಧಿವಾದ ಹೇಳಿದ್ದರು. ಅದರ ಪರಿಣಾಮವಾಗಿ ಸಂಪೂರ್ಣ ಬದಲಾಗುವುದಾಗಿ ಜಗದೀಶ್ ತೀರ್ಮಾನಿಸಿದ್ದಾರೆ.