ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದಾರೆ.
ನವಲಗುಂದ: ಹೆಣ್ಣು ಮಕ್ಕಳ ಮಹತ್ವದ ಬಗ್ಗೆ ಅರಿವು ಮೂಡಿಸಿ: ತಹಶೀಲ್ದಾರ್ ಸುಧೀರ ಸಾಹುಕಾರ!
ಈ ವಾರ ಜಗದೀಶ್, ಯಮುನಾ ಶ್ರೀನಿಧಿ, ಹಂಸಾ, ಭವ್ಯಾ, ಗೌತಮಿ, ಚೈತ್ರಾ ಕುಂದಾಪುರ, ಶಿಶಿರ್, ಮಾನಸಾ ಮತ್ತು ಮೋಕ್ಷಿತಾ ಅವರು ಈ ವಾರ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿದ್ದಾರೆ. ಇದರಿಂದ ಅವರಿಗೆ ಶಾಕ್ ಆಗಿದೆ. ಅವರು ಮೊದಲ ವಾರ ಹೆಚ್ಚು ಆ್ಯಕ್ಟೀವ್ ಆಗಿದ್ದರೂ ಕೂಡ ಎಲಿಮಿನೇಷನ್ ಆಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ
ಯಮುನಾ ಶ್ರೀನಿಧಿ ಅವರು ಮೊದಲ ದಿನದಿಂದಲೂ ಆ್ಯಕ್ಟೀವ್ ಆಗಿದ್ದರು. ಬಿಗ್ ಬಾಸ್ ಮನೆಗೆ ಕಾಲಿಟ್ಟ ಕೆಲವೇ ಕ್ಷಣಗಳ ಬಳಿಕ ಅವರು ಗೋಲ್ಡ್ ಸುರೇಶ್ ಬಳಿ ವಾದಕ್ಕೆ ಇಳಿದಿದ್ದರು. ಎಲ್ಲದೇ ಜಗದೀಶ್ ಅವರು ಹಲವು ಬಾರಿ ನಿಯಮಗಳನ್ನು ಮುರಿದಾಗ ನೇರವಾಗಿ ವಿರೋಧಿಸಿದ್ದರು. ಇಷ್ಟೆಲ್ಲ ಆ್ಯಕ್ಟೀವ್ ಆಗಿದ್ದರೂ ಸಹ ಅವರ ಆಟ ಒಂದೇ ವಾರದಲ್ಲಿ ಅಂತ್ಯವಾಗಿದೆ.
ಯಮುನಾ ಶ್ರೀನಿಧಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವಾಗ ಐಶ್ವರ್ಯಾ ಭಾವುಕವಾಗಿ ಕಣ್ಣೀರು ಹಾಕಿದರು. ಬಳಿಕ ವೇದಿಕೆಗೆ ಬಂದ ಯಮುನಾ ಅವರು ಸುದೀಪ್ ಜತೆ ಎಲಿಮಿನೇಷನ್ ಬಗ್ಗೆ ಮಾತನಾಡಿದರು. ‘ಇದನ್ನು ನಾನು ನಿರೀಕ್ಷಿಸಿರಲ್ಲ, ಇನ್ನಷ್ಟು ದಿನ ಇರುವಷ್ಟು ಸಾಮರ್ಥ್ಯ ನನ್ನಲ್ಲಿ ಇತ್ತು ಅನಿಸುತ್ತೆ. ಶಿಶಿರ್, ಧರ್ಮ, ತ್ರಿವಿಕ್ರಮ್ ಅವರು ಟಾಪ್ 3 ಸ್ಪರ್ಧಿಗಳಾಗಿರುತ್ತಾರೆ’ ಎಂದು ಹೇಳಿ ಬಿಗ್ ಬಾಸ್ ಆಟಕ್ಕೆ ಯಮುನಾ ವಿದಾಯ ಹೇಳಿದರು.