ಹುಬ್ಬಳ್ಳಿ : ಒನ್ ನೇಷನ್ ಒನ್ ಲಾ ಎಲ್ಲದಕ್ಕೂ ಅನ್ವಯವಾಗಲಿ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಸಂಘ ಪರಿವಾರದವರು ವಕ್ಫ್ ಕುರಿತು ಅಪಪ್ರಚಾರ ಮಾಡುತ್ತಿದ್ದು, ಅದರ ವಿರುದ್ಧ ನಾವು ದೇಶಾದ್ಯಂತ ಜಾಗೃತಿ ಮೂಡಿಸುತ್ತೇವೆ .
Hariprasad: ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ: ಬಿ.ಕೆ ಹರಿಪ್ರಸಾದ್!
ವಿವಿಧ ಕಡೆ ಸಮಾವೇಶಗಳನ್ನು ಮಾಡ್ತೇವೆ ಕಾಯ್ದೆಗೆ ತಿದ್ದುಪಡಿ ಬಗ್ಗೆ ಸಂಸತ್ ನಲ್ಲಿ ನಿರ್ಣಯವಾಗುತ್ತೆ
ವಿವಿಧ ಸಮುದಾಯಗಳ ನಡುವೆ ಭಿನ್ನಾಪ್ರಾಯ ಸೃಷ್ಟಿಯಾಗುತ್ತಿದೆ. ಒನ್ ನೇಷನ್ ಒನ್ ಲಾ ಅನ್ನುತ್ತೀರಿ. ಆಯಾ ಆಚರಣೆ ಆಯಾ ಧರ್ಮದವರಿಗೆ ಬಿಟ್ಟದ್ದು ಆದ್ರೆ ನಿಯಮ ಬದಲಾಯಿಸೋದಾದ್ರೆ ಎಲ್ರಿಗೂ ಆಗಬೇಕು
ವಕ್ಫ್ ಕಮಿಟಿಯಲ್ಲಿ ಅನ್ಯ ಧರ್ಮಿಯರಿಗೆ ಸೇರಿಸೋದಾದ್ರೆ,
ಬೇರೆ ಧಾರ್ಮಿಕ ಕೇಂದ್ರಗಳ ವಿಚಾರದಲ್ಲಿಯೂ ಇದೆ ನಡೆ ಅನುಸರಿಸಬೇಕು ಎಂದ ಅವರು ಪ್ರಧಾನಿ ನರೇಂದ್ರಮೋದಿ ಅವರ ಅಜೆಂಡಾ ಬಗ್ಗೆ ನಾವು ಜೆ.ಪಿ.ಸಿ ಯಲ್ಲಿ ವಿರೋಧ ಮಾಡುತ್ತಿದ್ದೇವೆ. ಆದ್ರೆ ಅವರಿಂದ ಉತ್ತರ ಕೊಡ್ತಿಲ್ಲ. ಇವರ ಬಳಿ ಯಾವುದೇ ಮಾಹಿತಿ ಇಲ್ಲ. ತಪ್ಪು ಮಾಹಿತಿ ಹರಡಿ, ಅದರ ಆಧಾರದ ಮೇಲೆ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿದ್ದಾರೆ ಎಂದರು.
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ ಈಗ ಪ್ರಸ್ತುತ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹಾಗಾಗಿ ದಲಿತ ಸಿಎಂ ಇತ್ಯಾದಿ ವಿಚಾರಗಳು ಸದ್ಯಕ್ಕೆ ಅಪ್ರಸ್ತುತ ಎಂದರು. ಎಲ್ಲಸಮುದಾಯದವರಿಗೂ ತಮ್ಮವರೆ ಸಿಎಂ ಆಗಲಿ ಅನ್ನೋ ಬಯಕೆ ಇರುತ್ತೆ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲವಾಗಿ ನಿಂತಿದೆ. ಪ್ರಕರಣ ದಾಖಲಾತಿ ಹಿನ್ನೆಲೆಯಲ್ಲಿ ಬಿಜೆಪಿಯವರು ರಾಜೀನಾಮೆ ಕೇಳ್ತಿದ್ದಾರೆಕೇಂದ್ರದಲ್ಲಿರೋ ಶೇ. 30 ರಷ್ಟು ಮಂತ್ರಿಗಳ ಮೇಲೆ ಕೇಸ್ ಗಳಿವೆ
ಬಹಳ ಗಂಭೀರ ಪ್ರಕರಣಗಳಿವೆ. ಹಾಗೆ ನೋಡಿದ್ರೆ ಅಮಿತ್ ಶಾ ಗೃಹ ಸಚಿವರಾಗೋಕೆ ಬರುವುದೇ ಇಲ್ಲ
ಅದಕ್ಕೂ ಇದಕ್ಕೂ ಕಂಪೇರ್ ಮಾಡೋಕೆ ಬರಲ್ಲ ಎಂದರು.