ಬೆಂಗಳೂರು:- HSR ಲೇಔಟ್ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವಿರುದ್ಧ 555 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
Hariprasad: ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ: ಬಿ.ಕೆ ಹರಿಪ್ರಸಾದ್!
ಮುಖೇಶ್ವರನ್ ವಿರುದ್ಧ 555 ಪುಟಗಳ ದೋಷಾರೋಪ ಪಟ್ಟಿಯನ್ನು 39 ಎಸಿಜೆಎಂ ಕೋರ್ಟ್ ಸಲ್ಲಿಸಿದ್ದಾರೆ. ಒಟ್ಟು 86 ಸಾಕ್ಷಿಗಳು, ಸಿಆರ್ಪಿಸಿ 164 ಅಡಿಯಲ್ಲಿ 4 ಜನರ ಹೇಳಿಕೆ, ಮೂವರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಕೂಡ ಚಾರ್ಜ್ ಶೀಟ್ನಲ್ಲಿ ದಾಖಲಿಸಲಾಗಿದೆ.
ಕಳೆದ ಆಗಸ್ಟ್ 17ರಂದು ರಾತ್ರಿ ಪಬ್ಗೆ ಬಂದಿದ್ದ ಯುವತಿ ಬೈಕ್ನಲ್ಲಿ ಡ್ರಾಪ್ ಪಡೆದಿದ್ದಳು. ಈ ವೇಳೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ ಮುಖೇಶ್ವರನ್ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಯುವತಿ ದೂರು ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. ಯುವತಿ ನೀಡಿದ ದೂರಿನ ಮೇರೆಗೆ ಮುಖೇಶ್ವರನ್ ವಿರುದ್ಧ ಬಿಎನ್ಎಸ್ 64, 117(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.