ಮಧ್ಯಪ್ರದೇಶ: ಮಧ್ಯಪ್ರದೇಶದ ಭೋಪಾಲ್ನಲ್ಲಿ ಗಂಡನ ಮನೆಯಲ್ಲಿ 16 ವರ್ಷಗಳಿಂದ ಬಂಧಿಯಾಗಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ರಾನು ಅವರ ತಂದೆ ಕಿಶನ್ ಲಾಲ್ ಸಾಹು ಅವರು ನೀಡಿದ ದೂರಿನ ನಂತರ ಮಹಿಳೆ ರಾನು ಸಾಹು ಅವರನ್ನು ರಕ್ಷಿಸಲಾಗಿದೆ.
ಬೆಂಗಳೂರಿನಲ್ಲಿ ರಾತ್ರಿ ಮಳೆ ಆರ್ಭಟ: ತತ್ತರಿಸಿದ ಸಿಲಿಕಾನ್ ಸಿಟಿ ಮಂದಿ, ಆದ ಅವಾಂತರಗಳೆಷ್ಟು!?
ರಾಣು ಅವರು 2006ರಲ್ಲಿ ಮದುವೆಯಾಗಿದ್ದರು, 2008 ರಿಂದ ಆಕೆಯ ತಂದೆಯಾಗಲಿ ಅಥವಾ ಇನ್ಯಾರಿಗೂ ಆಕೆಯ ಮುಖವನ್ನು ನೋಡಲು ಕೂಡ ಬಿಟ್ಟಿಲ್ಲ, ಆಕೆ 16 ವರ್ಷಗಳಿಂದ ಮನೆಯಿಂದ ಹೊರಗೂ ಕಾಲಿಡಲೂ ಬಿಡದೆ ಮನೆಯಲ್ಲೇ ಬಂಧಿಯಾಗಿದ್ದಳು.
ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ರಾಣುವನ್ನು ತನ್ನ ಮಗ ಹಾಗೂ ಮಗಳಿಂದ ಕೂಡ ದೂರವಿಟ್ಟಿದ್ದಾರೆ ಎಂದು ಅವರ ತಂದೆ ಕಿಶನ್ ಲಾಲ್ ತಿಳಿಸಿದ್ದಾರೆ.
ರಾಣುವಿನ ಅತ್ತೆಯ ಅಕ್ಕಪಕ್ಕದ ಮನೆಯವರು ಕಿಶನ್ ಲಾಲ್ ಅವರಿಗೆ ಕರೆ ಮಾಡಿ ಆಕೆಯ ಮನೆಯಲ್ಲಿ ಪತಿ ಸೇರಿದಂತೆ ಹಲವರು ಕಿರುಕುಳ ನೀಡುತ್ತಿದ್ದಾರೆ, ಆಕೆಯ ಸ್ಥಿತಿ ತುಂಬಾ ಹದಗೆಡುತ್ತಿದೆ ನೀವು ಆಕೆಯನ್ನು ಕರೆದುಕೊಂಡು ಹೋಗಿ ಎಂದು ಕರೆ ಮಾಡಿದ್ದರು. ನಂತರ ಕಿಶನ್ ಅವರು ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ, ಪೊಲೀಸ್ ಸಿಬ್ಬಂದಿ ತಂಡವು ಎನ್ಜಿಒ ಸಹಾಯದಿಂದ ರಾಣುವನ್ನು ರಕ್ಷಿಸಿತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ