ಇಸ್ರೇಲ್ ಹಾಗೂ ಇರಾನ್ ನಡುವಿನ ದಾಳಿ ದಿನೇ ದಿನೇ ಹೆಚ್ಚುತ್ತಲೆ ಇದೆ. ಬೈರುತ್ ನಲ್ಲಿ ಇಸ್ರೇಲ್ ವಾಯುಸೇನೆ ನಡೆಸುತ್ತಿರುವ ವಾಯುದಾಳಿ ತೀವ್ರವಾಗುತ್ತಿದ್ದು, ಅತ್ತ ಹೆಜ್ಬೊಲ್ಲಾ ಬಂಡುಕೋರ ಸಂಘಟನೆಯ ನಾಯಕರೆಲ್ಲ ಒಬ್ಬರ ಹಿಂದೊಬ್ಬರಂತೆ ಕಣ್ಮರೆಯಾಗುತ್ತಿದ್ದಾರೆ.
ಹೆಜ್ಬೊಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾಹ್ ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆತನ ಉತ್ತರಾಧಿಕಾರಿಗಳೂ ಕೂಡ ಒಬ್ಬರ ನಂತರ ಒಬ್ಬರು ನಾಪತ್ತೆಯಾಗುತ್ತಿದ್ದಾರೆ.
ಈ ಹಿಂದೆ ಹೆಷಜ್ಬೊಲ್ಲಾ ಕಮಾಂಡರ್ ನಬಿಲ್ ಕೌಕ್, ಹೆಜ್ಬೊಲ್ಲಾ ಸಂಘಟನೆಯ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿ, ನಸ್ರಲ್ಲಾಹ್ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ವಾಯುದಾಳಿಯಲ್ಲಿ ಮೃತಪಟ್ಟಿದ್ದರು. ಒಬ್ಬರ ಹಿಂದೊಬ್ಬರಂತೆ ನಾಯಕರು ಮೃತಪಡುತ್ತಿರುವುದು ಇರಾನ್ ಗೆ ನುಂಗಲಾರದ ತುತ್ತಾಗಿದೆ.
ಇದೀಗ ಹಿಜ್ಬುಲ್ಲಾ ಮತ್ತೋರ್ವ ಕಮಾಂಡರ್ ಹಾಗೂ ನಸ್ರಲ್ಲಾನ ಸಂಭಾವ್ಯ ಉತ್ತರಾಧಿಕಾರಿ ಕೂಡ ಕಣ್ಮರೆಯಾಗಿದ್ದು, ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಶುಕ್ರವಾರದಿಂದಲೇ ಅಂದರೆ ಇಸ್ರೇಲಿ ವೈಮಾನಿಕ ದಾಳಿಯ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಲೆಬನಾನಿನ ಭದ್ರತಾ ಮೂಲಗಳು ತಿಳಿಸಿವೆ ಎನ್ನಲಾಗಿದೆ.
ದಕ್ಷಿಣ ಲೆಬನಾನ್ ಬಳಿಕ ಹಿಜ್ಬುಲ್ಲಾ ಭಯೋತ್ಪಾದಕರ ಗುಂಪನ್ನು ಗುರಿಯಾಗಿಸಿ ಉತ್ತರ ಲೆಬನಾನ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ. ಟ್ರಿಪೋಲಿ ಶನಿವಾರ ಟ್ರಿಪೋಲಿ ನಗರದ ಮೇಲೆ ದಾಳಿ ನಡೆಸಿ, ಹಮಾಸ್ನ ಚೀಫ್ ಕಮಾಂಡರ್ ಹಾಗೂ ಆತನ ಕುಟುಂಬವನ್ನು ಹತ್ಯೆಗೈದಿದೆ. ಈ ಬೆನ್ನಲ್ಲೇ ಇಸ್ರೇಲ್ ಸೇನೆಯು ಇನ್ನಷ್ಟು ಪ್ರದೇಶಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದು, ತಕ್ಷಣವೇ ಆ ಪ್ರದೇಶದ ನಿವಾಸಿಗಳು ಸ್ಥಳದಿಂದ ತೆರವುಕೊಳ್ಳುವಂತೆ ಸೂಚಿಸಿವೆ.