ಬೆಂಗಳೂರು:– ರಾತ್ರಿ ಸುರಿದ ಮಳೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಅವಾಂತರಗಳು ಸೃಷ್ಟಿಯಾಗಿವೆ.
ಯಲಹಂಕ, ಪುಟ್ಟೇನಹಳ್ಳಿ ಸೇರಿದಂತೆ ನಗರದ ಹಲವೆಡೆ ರಾತ್ರಿ ಸುರಿದ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಮಳೆಗೆ ಪಾರ್ಕ್ವೆಸ್ಟ್ ಅಪಾರ್ಟ್ಮೆಂಟ್ ಹಿಂಭಾಗ ಕಾಂಪೌಂಡ್ ಗೋಡೆ ಕುಸಿದಿದೆ. 10 ಅಡಿ ಎತ್ತರದ ಗೋಡೆ ರಸ್ತೆಗೆ ಉರುಳಿ ಅವಾಂತರ ಸೃಷ್ಟಿಯಾಗಿದೆ. ಗೋಡೆ ಕುಸಿದಿದ್ದರಿಂದ 10ಕ್ಕೂ ಹೆಚ್ಚು ಬೈಕ್ಗಳು ಜಖಂ ಆಗಿದ್ದು ವಿದ್ಯುತ್ ಕಂಬದ ಮೇಲೆ ಗೋಡೆ ಬಿದ್ದ ಹಿನ್ನೆಲೆ ಕಂಬ ವಾಲಿದೆ. ಮನೆಯಿಂದ ಹೊರಬರಲಾಗದೇ ಸ್ಥಳೀಯರು ಪರದಾಡುತ್ತಿದ್ದಾರೆ.
ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ: ಹುಡುಗಿ ಯಾರು ಗೊತ್ತಾ?
ಬೆಂಗಳೂರಿನ ಹಲವೆಡೆ 10ಕ್ಕೂ ಅಧಿಕ ಮರಗಳು ಧರಾಶಾಹಿ. ಬೆಂಗಳೂರು ದಕ್ಷಿಣ ವಲಯದಲ್ಲಿ ಮರಗಳು ಬಿದ್ದು ಕಾರು, ಆಟೋ, ಬೈಕ್ಗಳು ಜಖಂ ಆಗಿವೆ. ಮಲ್ಲೇಶ್ವರಂ 17ನೇ ಕ್ರಾಸ್ನಲ್ಲಿ ಕ್ಲೌಡ್ ನೈನ್ ಆಸ್ಪತ್ರೆ ಮುಂಭಾಗದಲ್ಲಿ ಬೃಹತ್ ಮರ ಧರೆಗುರುಳಿದೆ. ರಾತ್ರಿಯಾಗಿದ್ದರಿಂದ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಬಿಬಿಎಂಪಿ ಸಿಬ್ಬಂದಿಯಿಂದ ಮರಗಳ ತೆರವು ಕಾರ್ಯ ಮುಂದುವರೆದಿದೆ.
ರಾತ್ರಿ ಸುರಿದ ಮಳೆಯಿಂದ ಜಯನಗರ 4th ಬ್ಲಾಕ್ ನಲ್ಲಿ ಮರದ ಕೊಂಬೆಗಳು ಧರೆಗುರುಳಿವೆ. ಇತ್ತ ಮೊನ್ನೆ ಮೊನ್ನೆಯಷ್ಟೇ ಇದೇ ಏರಿಯಾದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಿದ್ದ ಪಾಲಿಕೆ ಎಷ್ಟರಮಟ್ಟಿಗೆ ಒಣಗಿದ್ದ ಮರಗಳನ್ನ ತೆರವು ಮಾಡಿತ್ತು ಅನ್ನೋ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.
ಸರ್ಜಾಪುರ ಮುಖ್ಯರಸ್ತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ರಸ್ತೆಯಲ್ಲಿ ನೀರು ನಿಂತಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೇ ಟ್ರ್ಯಾಕ್ ಗೆ ನೀರು ಬರುತ್ತೆ ಅಂತಾ ರೈಲ್ವೇ ಇಲಾಖೆ ನೀರು ಹರಿಯೋ ಜಾಗವನ್ನ ಮುಚ್ಚಿರೋದು ಇಡೀ ರಸ್ತೆ ಜಲಾವೃತವಾಗುವಂತೆ ಮಾಡಿದೆ.
ಇತ್ತ ನೀರು ತುಂಬಿದ ರಸ್ತೆಯಲ್ಲೇ ವಾಹನ ಸವಾರರು ಸರ್ಕಸ್ ಮಾಡಿಕೊಂಡು ಸಂಚಾರ ಮಾಡ್ತಿದ್ದು, ಪ್ರತಿಬಾರೀ ಮಳೆ ಬಂದಾಗಲೂ ಇದೇ ಸ್ಥಿತಿ ಎದುರಾಗ್ತಿರೋದಕ್ಕೆ ಸ್ಥಳೀಯರು ಕಂಗಾಲಾಗಿಬಿಟ್ಟಿದ್ದಾರೆ. ಮಕ್ಕಳನ್ನ ಶಾಲೆಗೆ ಕಳಿಸೋಕು ಆಗ್ತಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ.