ವಾರದ ಕೆಲ ದಿನಗಳಲ್ಲಿ ಯಾವುದೇ ಕಾರಣಕ್ಕೂ ಹೊಸ ಬಟ್ಟೆಗಳನ್ನ ಖರೀದಿ ಮಾಡಬಾರದು. ಹೊಸ ಬಟ್ಟೆಯನ್ನ ಖರೀದಿ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು ಎಂಬುದು ಇಲ್ಲಿದೆ.
ಭಾನುವಾರ: ಅನೇಕ ಜನರು ಭಾನುವಾರ ಬಟ್ಟೆ ಖರೀದಿ ಮಾಡುತ್ತಾರೆ. ಈ ದಿನ ರಜೆ ಇರುವುದರಿಂದ ಸಮಯ ಸಿಗುತ್ತದೆ ಎನ್ನುವ ಕಾರಣಕ್ಕೆ ಈ ದಿನವನ್ನ ಆಯ್ಕೆ ಮಾಡಲಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಯಾವುದೇ ಕಾರಣಕ್ಕೂ ಭಾನುವಾರ ಮಾತ್ರ ಹೊಸ ಬಟ್ಟೆ ಖರೀದಿ ಮಾಡಬಾರದು ಎನ್ನಲಾಗುತ್ತದೆ. ಈ ದಿನ ಬಟ್ಟೆ ಖರೀದಿ ಮಾಡುವುದರಿಂದ ಕಷ್ಟಗಳು ಬರುತ್ತದೆ ಎನ್ನುವ ನಂಬಿಕೆ ಇದೆ. ಇದರ ಜೊತೆಗೆ ಭಾನುವಾರ, ಮಂಗಳವಾರ ಅಥವಾ ಶನಿವಾರದಂದು ನೀವು ಹೊಸ ಬಟ್ಟೆಗಳನ್ನು ಧರಿಸಬಾರದು.
ಆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡದಿರಲು ನಿರ್ಧಾರ: ಚಲುವರಾಯಸ್ವಾಮಿ!
ಸೋಮವಾರ: ಅನೇಕ ಜನರಿಗೆ ಗೊತ್ತಿರದ ವಿಚಾರ ಎಂದರೆ ಸೋಮವಾರ ಸಹ ಹೊಸ ಬಟ್ಟೆಯನ್ನ ಖರೀದಿ ಮಾಡಬಾರದು. ನಂಬಿಕೆಗಳ ಪ್ರಕಾರ ಈ ದಿನ ಬಟ್ಟೆ ಖರೀದಿ ಮಾಡಿದರೆ ಅದು ಒದ್ದೆಯಾಗುತ್ತೆ ಅಥವಾ ನೆನೆಯುತ್ತದೆ ಎನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಕಾರಣಕ್ಕೂ ಹರಿದ ಅಥವಾ ಸುಟ್ಟ ಬಟ್ಟೆಗಳನ್ನು ಧರಿಸಬಾರದು. ಜೋತಿಷ್ಯ ಶಾಸ್ತ್ರದ ಪ್ರಕಾರ ಹರಿದ ಬಟ್ಟೆಗಳ ಮೇಲೆ ರಾಹುವಿನ ಕೆಟ್ಟ ಪರಿಣಾಮ ಇರುತ್ತದೆ. ಹಾಗಾಗಿ ಈ ಬಟ್ಟೆಗಳನ್ನ ಧರಿಸುವುದರಿಂದ ಜೀವನದಲ್ಲಿ ರಾಹು ಕಾಟ ಹೆಚ್ಚಾಗುತ್ತದೆ. ಇದರಿಂದ ಒಂದೆಲ್ಲಾ ಒಂದು ಸಮಸ್ಯೆಗಳು ಬರುತ್ತದೆ,
ಮಂಗಳವಾರ: ಜ್ಯೋತಿಷ್ಯದ ನಂಬಿಕೆಗಳ ಪ್ರಕಾರ ಮಂಗಳವಾರ ಸಹ ಯಾವುದೇ ಕಾರಣಕ್ಕೂ ಹೊಸ ಬಟ್ಟೆಯನ್ನ ಖರೀದಿ ಮಾಡಬಾರದು. ಇದರಿಂದ ಬದುಕಿನಲ್ಲಿ ಭಯ ಹಾಗೂ ನೋವು ಕಾಡುತ್ತೆ ಎನ್ನುವ ನಂಬಿಕೆ ಇದೆ. ಇನ್ನು ಮಂಗಳವಾರದಂದು ಹೊಸ ಬಟ್ಟೆಗಳನ್ನು ಖರೀದಿಸುವುದು ಮಾತ್ರವಲ್ಲದೇ ಧರಿಸಲೂಬಾರದು. ಇದರಿಂದ ಜೀವನದಲ್ಲಿ ಕೋಪ ಮತ್ತು ಒತ್ತಡದ ಹೆಚ್ಚಾಗುತ್ತದೆ