ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ ಆಗಿದೆ.
ಇಂತವರಿಗೆಲ್ಲಾ ನಾನ್ಯಾಕೆ ಹೆದರಬೇಕು, ತಲೆ ಬಾಗುವುದು ಅವರಿಗೆ ಮಾತ್ರ: ಸಿದ್ದರಾಮಯ್ಯಗೆ HDK ಟಾಂಗ್!
ನಿನ್ನೆಯ ವಾದ ಮಂಡಿಸಿದ್ದ ಸಿವಿ ನಾಗೇಶ್ ಆರೋಪ ಪಟ್ಟಿಯಲ್ಲಿರುವ ವೈರುಧ್ಯಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿಲ್ಲ ಎಂದು ಹೇಳಿ ಕೆಲವು ಉದಾಹರಣೆಗಳನ್ನು ನೀಡಿದರು. ಇಂದಿನ ವಾದದಲ್ಲಿ ಸಾಕ್ಷ್ಯಗಳು, ಸಾಕ್ಷಿಗಳ ಹೇಳಿಕೆ, ಮರಣೋತ್ತರ ಪರೀಕ್ಷಾ ವರದಿ, ಇತರೆ ಕೆಲವು ವರದಿಗಳನ್ನು ಗುರಿಯಾಗಿಸಿಕೊಂಡು ಸುದೀರ್ಘವಾಗಿ ವಾದ ಮಂಡಿಸಿದರು.
ಸಿವಿ ನಾಗೇಶ್ ಅವರ ಸುದೀರ್ಘ ವಾದ ಆಲಿಸಿದ ನ್ಯಾಯಾಧೀಶರು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 08 ಅಂದರೆ ಮಂಗಳವಾರಕ್ಕೆ ಮುಂದೂಡಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಸಹ ಅಕ್ಟೋಬರ್ 8 ಕ್ಕೆ ಮುಂದೂಡಲಾಗಿದೆ. ಪವಿತ್ರಾ ಗೌಡ ಪರ ವಕೀಲರು ಈ ವರೆಗೆ ತಮ್ಮ ವಾದವನ್ನೇ ಮಂಡನೆ ಮಾಡಲು ಅವರಿಗೆ ಅವಕಾಶ ಸಿಕ್ಕಿಲ್ಲ, ಆದರೆ ಅಕ್ಟೋಬರ್ 08 ರಂದು ಅವರು ವಾದ ಮಂಡಿಸಬಹುದು.