ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಏಕಾ ಏಕಿ ಹೊತ್ತಿಕೊಂಡ ಬೆಂಕಿ ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು ಈ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಗೆಸ್ಟ್ ಲೈನ್ ಸರ್ಕಲ್ ಬಳಿ ನಡೆದಿದೆ.
ಚಂದಾಪುರದ ಕಾಚನಾಯಕನಹಳ್ಳಿ ಮೂಲದವರಿಗೆ ಸೇರಿದ ಕಾರು ಕಾಚನಾಯಕನಹಳ್ಳಿ ಗ್ರಾಮದಿಂದ ಚೆನೈಗೆ ಹೋಗುತ್ತಿದ್ದಾಗ ಘಟನೆ ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದರು. ಕಾರಿನ ಇಂಜಿನಲ್ಲಿ ಕಾಣಿಸಿಕೊಂಡ ಹೊಗೆ ಕಾಣಿಸುತ್ತಿದ್ದಂತೆ ತಕ್ಷಣ ಕಾರಿನಿಂದ ಇಳಿದ ಪ್ರಯಾಣಿಕರು ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಧಗಧಗಿಸಿದ ಬೆಂಕಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ.
ಸತೀಶ್ ಜಾರಕಿಹೊಳಿ- ಖರ್ಗೆ ಮೀಟ್ ಹಿಂದಿನ ಉದ್ದೇಶವೇನು: ಸಾಹುಕಾರ್ ಭೇಟಿಯ ಮರ್ಮವೇನು?
ಸದ್ಯ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಸ್ಥಳಕ್ಕೆ ಬಂದ ಅತ್ತಿಬೆಲೆ ಪೋಲಿಸರಿಂದ ಬೆಂಕಿ ನಂದಿಸುವ ಕಾರ್ಯ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್.
ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.