ನವದೆಹಲಿ: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮೂರು ದಿನಗಳ ಪ್ರವಾಸಕ್ಕಾಗಿ ಮುಂದಿನ ವಾರ ಭಾರತಕ್ಕೆ ಆಗಮಿಸಲಿದ್ದಾರೆ. ಈ ಭೇಟಿಯ ವೇಳೆ ಬೆಂಗಳೂರಿಗೂ ಆಗಮಿಸಿ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
G Parameshwar: ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ: ಜಿ. ಪರಮೇಶ್ವರ್!
ಕಳೆದ ಮಾರ್ಚ್ನಲ್ಲಿ ನಡೆದ ಮಾಲ್ಡೀವ್ಸ್ ಸಂಸದೀಯ ಚುನಾವಣೆ ವೇಳೆ ಮುಯಿಜು ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದರು. ಗೆದ್ದ ಮೇಲೆ ತಮ್ಮ ದೇಶ ದಲ್ಲಿನ ಭಾರತೀಯ ಯೋಧರಿಗೆ ದೇಶ ತೊರೆಯಲು ಗಡುವು ನೀಡಿದ್ದರು. ಚೀನಾ ಜೊತೆಗೆ ಮತ್ತಷ್ಟು ಸ್ನೇಹದ ಹಸ್ತಚಾಚಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದಕ್ಕೆ ಭಾರತೀಯರು ನೀಡಿದ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನದ ತಿರುಗೇಟಿನ ಬಳಿಕ ಎಚ್ಚೆತ್ತುಕೊಂಡ ಮುಯಿಜು, ಪ್ರವಾಸೋದ್ಯಮ ನಂಬಿರುವ ತಮ್ಮ ದೇಶಕ್ಕೆ ಭಾರತ ಎಷ್ಟು ಅಗತ್ಯ ಎಂದು ಮನಗಂಡು ತಣ್ಣಗಾಗಿದ್ದರು.
ಕರ್ನಾಟಕ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಹೊಂದಿದ ನಗರ. ಭಾರತದ ಸಿಲಿಕಾನ್ ಸಿಟಿ ಎಂಬ ಹಿರಿಮೆ ಹೊಂದಿದೆ. ಜಾಗತಿಕ ಕಂಪನಿಗಳೆಲ್ಲಾ ಇಲ್ಲಿ ಬೀಡುಬಿಟ್ಟಿವೆ. ಭಾರತದ ಸ್ಟಾರ್ಟಪ್ಗಳ ರಾಜಧಾನಿ ಎಂಬ ಹಿರಿಮೆಯೂ ಇದೆ. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೂಡಿಕೆ ಆಗುತ್ತಿದೆ. ಭಾರತದ ದೊಡ್ಡ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಮಾಲ್ಡೀಕ್ಸ್ನೊಂದಿಗೆ ಆರ್ಥಿಕ ಒಪ್ಪಂದ ಸಾಧ್ಯತೆ ಇರುವ ಪ್ರಮುಖ ನಗರಗಳ ಪೈಕಿ ಒಂದು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಲವು ಉದ್ಯಮ ಸಭೆಗಳಲ್ಲಿ ಮುಯಿಜು ಭಾಗಿಯಾಗುತ್ತಿದ್ದಾರೆ.