ಬೆಂಗಳೂರು:- ನಗರದ KR ಮಾರ್ಕೆಟ್ ನಲ್ಲಿ ಕೊಳಕು ಜಾಗದಲ್ಲೇ ವ್ಯಾಪಾರಿಗಳು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.
ಸಿಟಿಯ ಅಕ್ಕ-ಪಕ್ಕದ ರೈತರು ವಾಹನಗಳಲ್ಲಿ ಬಂದು ಸೊಪ್ಪು ಮಾರಾಟ ಮಾಡುತ್ತಾರೆ. ಮಾರಾಟ ಆಗದೆ ಇದ್ದಲ್ಲಿ ಅದನ್ನೆಲ್ಲ ಅಲ್ಲೆ ಬಿಸಾಕಿ ಹೋಗುತ್ತಾರೆ. ಇದರಿಂದಾಗಿ ಕೊಳೆತು ಕಸವಾಗುತ್ತೆ. ಆದರೆ, ಈ ಕಸ ಎತ್ತದೆ ಪಾಲಿಕೆ ನಿರ್ಲಕ್ಷದಿಂದಾಗಿ ಎಲ್ಲಿ ನೋಡಿದರೂ ಕಸ ಸಿಗುತ್ತದೆ.
ಕಾಮಗಾರಿಗಳ ಹೆಸರಲ್ಲಿ ಅಕ್ರಮ: ಬಿಬಿಎಂಪಿ ಆರೋಗ್ಯಾಧಿಕಾರಿ ವಿರುದ್ಧ ಲಕ್ಷಾಂತರ ರೂ. ವಂಚನೆ ಆರೋಪ!
ಪರಿಣಾಮ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ದುಸ್ಥಿತಿ ಎದುರಾಗಿದೆ. ಜೊತೆಗೆ ಕಸ ಬಿದ್ದ ಜಾಗದಲ್ಲೆ ದಿನ ಬಳಕೆ ತರಕಾರಿ ಸೊಪ್ಪು ಮಾರಾಟ ಮಾಡುತ್ತಾರೆ. ಇದರಿಂದ ರೋಗ ಹರಡುವ ಭಯ ಸೃಷ್ಟಿಯಾಗಿದ್ದು, ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ನಿನ್ನೆ ಮಾರ್ಕೆಟ್ನಲ್ಲಿ ಕಮೀಷನರ್ ರೌಂಡ್ಸ್ ಹೊಡೆದು ಸ್ವಚ್ಚತೆ ಪಾಠ ಹೇಳಿದ್ದಾರೆ. ಇವತ್ತು ನೋಡಿದರೆ ಮಾರ್ಕೇಟ್ ನಲ್ಲಿ ಯಥಾ ಸ್ಥಿತಿ ಇದೆ. ಗಾಂಧಿ ಜಯಂತಿಗೆ ಮಾತ್ರ ಸ್ವಚ್ಚತೆ ಪಾಠ ಸೀಮಿತವಾಯ್ತಾ ಎನ್ನುವಂತಾಗಿದ್ದು, ಕಸ ಎತ್ತುವ ಪಾಲಿಕೆ ಸಿಬ್ಬಂದಿಗೆ ಕಸ ಎತ್ತಲು ಹ್ಯಾಂಡ್ ಗ್ಲೌಸ್, ಮಾಸ್ಕ್ ಕೊಡಬೇಕು. ಆದರೆ, ಪಾಲಿಕೆ ಕೊಡದ ಕಾರಣ ಅವರು ಕೆಲಸ ಮಾಡುವುದನ್ನ ನೋಡಿದರೆ ನಮಗೂ ಬೇಸರವಾಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಪಾಲಿಕೆ ನಿರ್ಲಕ್ಷ್ಯದಿಂದಾಗಿ ಕೆ ಆರ್ ಮಾರ್ಕೆಟ್ ರೋಗ ರೋಜಿನಗಳನ್ನ ಹರಡುವ ಸ್ಥಾನದಂತಾಗಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಾಗಿದೆ.