ಆ್ಯಪಲ್ ಸ್ಟೋರ್ಗಳ ಸಂಖ್ಯೆ ಭಾರತದಲ್ಲಿ ಮುಂದಿನ ವರ್ಷದೊಳಗೆ ಆರಕ್ಕೆ ಏರಲಿದೆ. 2025ರಲ್ಲಿ ಬೆಂಗಳೂರು ಸೇರಿದಂತೆ ಇನ್ನೂ ನಾಲ್ಕು ಕಡೆ ಆ್ಯಪಲ್ ಸ್ಟೋರ್ಸ್ ತೆರೆಯಲಾಗುತ್ತದೆ ಎಂದು ಕಂಪನಿ ಹೇಳಿಕೆ ನೀಡಿದೆ.
ಕಳೆದ ವರ್ಷ ಭಾರತದಲ್ಲಿ ಎರಡು ರೀಟೇಲ್ ಸ್ಟೋರ್ಗಳನ್ನು ತೆರೆದಿದ್ದ ಆ್ಯಪಲ್ ಇದೀಗ ಇನ್ನೂ ನಾಲ್ಕು ಸ್ಟೋರ್ಸ್ (Apple Stores) ಆರಂಭಿಸಲು ಯೋಜಿಸಿದೆ. ವರದಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ನಾಲ್ಕು ಕಡೆ ಹೊಸ ಆ್ಯಪಲ್ ಸ್ಟೋರ್ಗಳು ಆರಂಭವಾಗಲಿವೆ. ಮುಂದಿನ ವರ್ಷ ಬೆಂಗಳೂರು, ಪುಣೆ, ಮುಂಬೈ ಮತ್ತು ದೆಹಲಿಯಲ್ಲಿ ನಾಲ್ಕು ರೀಟೇಲ್ ಮಳಿಗೆಗಳು ಶುರುವಾಗಲಿವೆ. ಕಳೆದ ವರ್ಷದ ಏಪ್ರಿಲ್ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್ ಸ್ಟೋರ್ಸ್ ಆರಂಭವಾಗಿದ್ದವು. ಈಗ ಇವೆರಡು ನಗರಗಳಿಗೆ ಮತ್ತೊಂದು ಆ್ಯಪಲ್ ಸ್ಟೋರ್ ಸಿಗಲಿದೆ.
ಆ್ಯಪಲ್ ಸಂಸ್ಥೆಯ ಐಫೋನ್ 16 ಸರಣಿಯ ಎಲ್ಲಾ ಸ್ಮಾರ್ಟ್ಫೋನ್ಗಳನ್ನೂ ಭಾರತದಲ್ಲಿ ತಯಾರಿಸಲು ನಿರ್ಧರಿಸಲಾಗಿದೆ. ಐಫೋನ್ ಸರಣಿಯ ಹೈ ಎಂಡ್ ಅವತರಣಿಕೆಗಳಾದ ಪ್ರೋ ಮತ್ತು ಪ್ರೋ ಮ್ಯಾಕ್ಸ್ ಅನ್ನು ಬೇರೆ ಕಡೆ ತಯಾರಿಸಿ ಭಾರತಕ್ಕೆ ತರಲಾಗುತ್ತಿದೆ. ಈಗ ಇವೂ ಕೂಡ ಭಾರತದಲ್ಲೇ ತಯಾರಾಗಲಿದೆ.