ಮುಂಬೈ ರಣಜಿ ಕ್ರಿಕೆಟ್ ತಂಡ ಮತ್ತು ರೆಸ್ಟ್ ಆಫ್ ಇಂಡಿಯಾ ಕ್ರಿಕೆಟ್ ತಂಡಗಳ ನಡುವೆ ನಡೆಯುತ್ತಿರುವ 2024ರ ಸಾಲಿನ ಇರಾನಿ ಕಪ್ ಕ್ರಿಕೆಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾದ ಆಲ್ರೌಂಡರ್ ಶಾರ್ದುಲ್ ಠಾಕೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತದ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿರುವ ಶಾರ್ದುಲ್ ಠಾಕೂರ್, ಇರಾನಿ ಕಪ್ ಪಂದ್ಯದಲ್ಲಿ ಹಾಲಿ ರಣಜಿ ಚಾಂಪಿಯನ್ಸ್ ಮುಂಬೈ ಪರ ಆಡುತ್ತಿದ್ದಾರೆ.
ಎರಡನೇ ಬಾರಿ ಪಾಕಿಸ್ತಾನ ವೈಟ್ ಬಾಲ್ ತಂಡದ ನಾಯಕತ್ವ ತೊರೆದ ಬಾಬರ್ ಆಝಮ್
ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಾಟದಲ್ಲಿ ಜ್ವರದ ನಡುವೆಯೂ ಮುಂಬೈ ಪರ ಬ್ಯಾಟಿಂಗ್ ಮಾಡಿದ್ದ ಶಾರ್ದುಲ್ ಠಾಕೂರ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಮಾಹಿತಿ ಹೊರಹಾಕಿವೆ. ಸ್ಟಾರ್ ಬ್ಯಾಟರ್ ಸರ್ಫರಾಝ್ ಖಾನ್ (222*) ಜೊತೆಗೂಡಿ 9ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟ ಕಟ್ಟಿದ್ದ ಶಾರ್ದುಲ್ ಠಾಕೂರ್, 59 ಎಸೆತಗಳಲ್ಲಿ 36 ರನ್ ಬಾರಿಸಿ ಮುಂಬೈ ತಂಡ 500ರ ಗಡಿ ದಾಟುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ ಸರ್ಫರಾಝ್ ದ್ವಿಶತಕ ಬಾರಿಸಲು ಸಾಥ್ ನಿಭಾಯಿಸಿದರು.
ಜ್ವರದ ಕಾರಣ ಆಗಾಗ ವಿರಾಮ ತೆಗೆದುಕೊಳ್ಳುತ್ತಲೇ ಬ್ಯಾಟಿಂಗ್ ಮುಂದುವರಿಸಿದ್ದ ಶಾರ್ದುಲ್ ಠಾಕೂರ್, ತಮ್ಮ ಹೋರಾಟದ ಇನಿಂಗ್ಸ್ನಲ್ಲಿ 4 ಫೋರ್ ಮತ್ತೊಂದು ಸಿಕ್ಸರ್ ಬಾರಿಸಿದ್ದರು. ಮುಂಬೈ ತಂಡದ ವೈದ್ಯಕೀಯ ಸಿಬ್ಬಂದಿ ಶಾರ್ದುಲ್ ಅವರ ಆರೋಗ್ಯ ಸ್ಥಿತಿ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಅವರ ಕಣ್ಗಾವಲಿನಲ್ಲೇ ಶಾರ್ದುಲ್ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೂ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಂದ್ಯದ ಉಳಿದ ಭಾಗಕ್ಕೆ ಅವರ ಲಭ್ಯತೆ ಅನುಮಾನವಾಗಿದೆ.