ವಿಜಯಪುರ:- ವಿಜಯಪುರದಲ್ಲಿ ಗಣಪತಿ ಚೌಕ್ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 10 ಗಂಟೆಯಲ್ಲಿ ಗಾಂಧಿಚೌಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ.
21 ವರ್ಷದ ಸೊಹೇಲ್ ಜಮಾದಾರ್ ಬಂಧಿತ ಆರೋಪಿ. ಕೋಮು ಗಲಭೆ ಸೃಷ್ಟಿಸಲು ಈ ಖದೀಮ ಸೋಹೆಲ್ ಜಮಾದಾರ್ ಕಲ್ಲು ಎಸೆದಿದ್ದರು.
ಇದೀಗ ಸೊಹೇಲ್ ನನ್ನ ಗಾಂಧಿ ಚೌಕ ಸಿಪಿಐ ಪ್ರದೀಪ ತಳಕೇರಿ ಹಾಗೂ ತಂಡ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಸೊಹೇಲ್ ಸ್ನೇಹಿತ ಪರಾರಿ ಆಗಿದ್ದು, ಆತನ ಬಂಧನಕ್ಕು ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ನಡೆದ ಬೆನ್ನಲ್ಲೆ ಸಿಪಿಐ ತಳಕೇರಿ ನೇತೃತ್ವದಲ್ಲಿ ಎಸ್ಪಿ ಹೃಷಿಕೇಶ್ ಸೋನಾವಣೆ ತಂಡ ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಹಾಗೂ ಕೃತ್ಯದ ವೇಳೆ ಬಳಸಿದ್ದ ಆಟೋ ನಂಬರ್ ಮೂಲಕ ಆರೋಪಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಕಲ್ಲು ಎಸೆತ ನಡೆದಿತ್ತು. ಕುಡಿದ ನಶೆಯಲ್ಲಿ ಕಲ್ಲು ತೂರಿ, ಸ್ಥಳದಲ್ಲಿದ್ದ ಹೋಮ್ಗಾರ್ಡ್ ಅವಾಚ್ಯವಾಗಿ ಖದೀಮರು ನಿಂದಿಸಿದ್ದರು.
ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.