ಧಾರವಾಡ : ಗ್ರಾಮ ಪಂಚಾಯತಿ ಸಿಬ್ಬಂದಿಗಳ ಕೆಲಸದ ಒತ್ತಡ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ಅಕ್ಟೊಬರ್ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟವಾಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕ ಪಿಡಿಓ ನೌಕರ ಒಕ್ಕೂಟದ ತಾಲ್ಲೂಕ ಅಧ್ಯಕ್ಷ ಸೋಮಶೇಖರ ಎಲಿಗಾರ ತಿಳಿಸಿದರು.
ಪಟ್ಟಣದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ, ಸಿಬ್ಬಂದಿ ವರ್ಗ, ಡಾಟಾ ಎಟ್ರಿ ಆಪರೇಟರ್ ಒಕ್ಕೂಟ, ಪಿಡಿಓ ನೌಕರ ಒಕ್ಕೂಟ ಮತ್ತು ರಾಜ್ಯ ಸರ್ಕಾರ ನೌಕರ ಸಂಘದ ಜಂಟಿಯಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಪಿಡಿಓ ಹುದ್ದೆ ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವದು, ನರೇಗಾ ಯೋಜನೆಯ ಗುರಿ ನಿಗದಿ ಕೈಬಿಡುವದು, ಪಂಚಾಯತಿ ಕಚೇರಿಗೆ ಅವಶ್ಯಕತೆ ಇರುವ ಸಿಬ್ಬಂದಿ ಕೊರತೆ ನಿಗಿಸುವದು ಇನ್ನುಳಿದ ಬೇಡಿಕೆ ಸರ್ಕಾರಕ್ಕೆ ಈಡೇರಿಸಲು ಒತ್ತಾಯಿಸಲಾಗುವದು ಎಂದರು.
Supreme Court: IIT ಪ್ರವೇಶ ಶುಲ್ಕ ಪಾವತಿಸಲಾಗದ ದಲಿತ ವಿದ್ಯಾರ್ಥಿಯ ನೆರವಿಗೆ ಬಂದ ಸುಪ್ರೀಂ ಕೋರ್ಟ್!
ಕ್ಲರ್ಕ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಒಕ್ಕೂಟದ ತಾಲ್ಲೂಕ ಅಧ್ಯಕ್ಷ ಪ್ರಭು ಅಂಗಡಿ ಮಾತನಾಡಿ, ಸರ್ಕಾರ ಪಂಚಾಯತಿಗೆ ಇ ಸ್ವತ್ತು ಹೊರತು ಪಡಿಸಿ ಜನನ ಮರಣ, ಪ್ರಮಾಣ ಪತ್ರ ನೀಡಲು ಆದೇಶ ಮಾಡಿದ್ದು ನಮಗೆ ಇನ್ನೊಬ್ಬ ಆಪರೇಟರ್ ನೀಡಬೇಕು ಎಂದರು.
ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಸಂತೋಷ ಮಾದನಭಾವಿ ಮಾತನಾಡಿ, ಕೆಡಿಪಿ, ಸಾಮಾನ್ಯ ಸಭೆ ಸರಿಯಾಗಿ ನಡೆಯುತ್ತಿಲ್ಲ, ಸದಸ್ಯರಿಗೆ ಗೌರವಧನ ಹೆಚ್ಚಳದ ಬೇಡಿಕೆ ಈಡೇರಿಸಬೇಕು ಎಂದರು. ಪಿಡಿಓ ನಾಗರಾಜಕುಮಾರ್ ಬೀದರಳ್ಳಿ, ಪಿಡಿಓಗಳಾದ ರವಿರಾಜ ಹಿರೇಗೌಡರ, ಶಂಕರ ಗೌಳೇರ, ಶಂಭುಲಿಂಗ ಹೊಸಮನಿ, ಜಿ. ಎನ್ ರಾಯನಾಳ, ರವಿಕುಮಾರ ರಾಥೋಡ, ನಾಗರಾಜ ಗಿರಿಯಪ್ಪನವರ, ಉಮ್ಮೆಶ ಚಿಕ್ಕಣ್ಣವರ ಗಂಗಾಧರ್ ರೆಡ್ಡೆರ, ಶಿವಕುಮಾರ್ ಜಾವೂರು, ಮುದಪ್ಪ ವಾಲಿಕರ, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.