ಕೋಲಾರ ನಗರದ ಕೋಟೆಯಲ್ಲಿ ನೆಲೆಗೊಂಡಿರುವ ಮಹಿಷಾಸುರ ಮರ್ದಿನಿ, ಪರಶುರಾಮರು ಸ್ಥಾಪಿತ, ಚಾಮುಂಡೇಶ್ವರಿ ಬಿರುದಾಂಕಿತ, ನಗರ ದೇವತೆ ಶ್ರೀ ಕೋಲಾರಮ್ಮನ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಗುರುವಾರ ಬೆಳಗ್ಗೆ ಒಂಬತ್ತು ಮೂವತ್ತರ ಸಮಯದಲ್ಲಿ ದೇವಿಗೆ ಪಾರ್ವತಿ ಅಲಂಕಾರ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ದೇವಾಲಯದ ಮಹಾದ್ವಾರದಲ್ಲಿ ಬೃಹತಾಕಾರದ ಚಾಮುಂಡೇಶ್ವರಿ ವಿಗ್ರಹ ಹಾಗೂ ಹೊರಾಂಗಣದಲ್ಲಿ ಸಪ್ತಮಾತ್ರಕೆಯರನ್ನು ಸ್ಥಾಪಿಸಿದ್ದು,
ನೋಡುಗರ ಗಮನ ಸೆಳೆಯುತ್ತಿದೆ. ಹೆಂಗಳೆಯರು ದೇವಿಗೆ ನಿಂಬೆಹಣ್ಣಿ ಹಾಗೂ ಕುಂಬಳಕಾಯಿ ಆರತಿ ಬೆಳಗಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಮ್ಮ ಎಂದು ಮೊರೆ ಹೋದರು.ಮುಂಜಾನೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಗರದೇವತೆಯ ದರ್ಶನ ಪಡೆದರು. ಎಲ್ಲಾ ಪೂಜಾ ಕೈಂಕರ್ಯಗಳನ್ನು ಸೋಮಶೇಖರ್ ದಿಕ್ಷಿತ್, ವಿನಯ್ ದೀಕ್ಷಿತ್ ನೆರವೇರಿಸಿಕೊಟ್ಟರು