ಬೆಂಗಳೂರು: ಮುಡಾ ಹಗರಣ ಸಂಬಂಧ ಇಡಿ ನೋಟಿಸ್ ನೀಡಿರುವ ವಿಚಾರವಾಗಿ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ
ಮಾಧ್ಯಮಗಳ ಬಳಿ ಮಾತನಾಡಿದ ಅವರು, ನನಗೆ ಯಾವುದೇ ಇಡಿ ನೋಟಿಸ್ ಬಂದಿಲ್ಲಇದೆಲ್ಲವೂ ಸುಳ್ಳುಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ನನಗೂ ಮುಡಾ ಹಗರಣಕ್ಕೂ ಏನು ಸಂಬಂಧ ನಮ್ಮ ಮನೆಯ ಬಾಗಿಲಿಗೂ ಯಾವುದೇ ನೋಟೀಸ್ ಅಂಟಿಸಿಲ್ಲಅದೇನು ಪೋಸ್ಟ್ ಆಫೀಸಾ? ಮುಡಾ ಪ್ರಕರಣದಲ್ಲಿ ನನ್ನ ಪಾತ್ರ ಏನಿದೆ? ನನಗೆ ಏಕೆ ನೋಟೀಸ್ ಕೊಡ್ತಾರೆ..? ಈ ರೀತಿಯ ಚಾರಿತ್ಯ ಹರಣ ಮಾಡಬಾರದು ಎಂದು ಹೇಳಿದ್ದಾರೆ.