ಮೈಸೂರು: ದಸರಾಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಭಾಷಣದ ಕೊನೆಯಲ್ಲಿ ಇನ್ನೊಂದು ವರ್ಷ ಒಳ್ಳೆಯ ಕೆಲಸ ಮಾಡಲು ದೇವಿ ಆಶೀರ್ವಾದ ಇರಲಿ ಎಂದು ಭಾವನಾತ್ಮಕ ನುಡಿಯನ್ನು ಆಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಇನ್ನೈದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹಿಂದೆ ಹೇಳುತ್ತಿದ್ದರು. ಆದರೆ ಈ ಬಾರಿ ಇನ್ನು ಒಂದು ವರ್ಷ ಎಂದು ನಿರ್ದಿಷ್ಟವಾಗಿ ಪ್ರಸ್ತಾಪಿಸುವ ಮೂಲಕ ಅಧಿಕಾರ ಹಂಚಿಕೆ ಒಪ್ಪಂದದ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಎದ್ದಿದೆ.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ತಮ್ಮ ಭಾಷಣದಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಇರುವವರೆಗೂ ಜನರ ಸೇವೆ ಮಾಡುತ್ತೇನೆ. ಎಲ್ಲರೂ ಮೊದಲ ಮನುಷ್ಯರಾಗೋಣ. ಪರಸ್ಪರ ಪ್ರೀತಿಸೋಣ. ಪರಸ್ಪರ ದ್ವೇಷಿಸಿಕೊಳ್ಳುವುದು ಬೇಡ. ಇನ್ನೊಂದು ವರ್ಷ ಒಳ್ಳೆಯ ಕೆಲಸ ಮಾಡಲು ದೇವಿ ಆಶೀರ್ವಾದ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎನ್ನುತ್ತಾ ಸಿಎಂ ತಮ್ಮ ಭಾಷಣವನ್ನು ಮುಗಿಸಿದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumar) ಮಧ್ಯೆ ಅಧಿಕಾರ ಹಂಚಿಕೆ ಸೂತ್ರಗಳು ನಡೆದಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಪಕ್ಷದ ಹೈಕಮಾಂಡ್ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳನ್ನಾಗಿ ನೇಮಿಸಿದ್ದೇವೆ ಎಂದು ಹೇಳಿತ್ತು. ನಂತರ ಅಧಿಕಾರ ಹಂಚಿಕೆಯ ಬಗ್ಗೆ ಯಾವುದ ಪ್ರಸ್ತಾಪ ಆಗಿರಲಿಲ್ಲ.