ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ನೀಡಿದಷ್ಟೇ ಖಾಸಗಿ ಶಾಲೆಗಳಿಗೆ ದಸರಾ ರಜೆ ನೀಡುವಂತೆ ಸರ್ಕಾರ ಒತ್ತಾಯ ಮಾಡಬಾರದು ಎಂದು ಖಾಸಗಿ ಶಾಲೆಗಳು ಸರ್ಕಾರಕ್ಕೆ ಆಗ್ರಹಿಸಿದೆ. ಈ ಸಂಬಂಧ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕ್ಯಾಮ್ಸ್ (KAMS) ಸಂಘಟನೆ ಸರ್ಕಾರಕ್ಕೆ ಆಗ್ರಹ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಸರ್ಕಾರ 15-20 ದಿನ ಸರ್ಕಾರಿ ಶಾಲೆಗಳಿಗೆ ದಸರಾ ರಜೆ ನೀಡಿದೆ. ಖಾಸಗಿ ಶಾಲೆಗಳಿಗೆ ಕಡ್ಡಾಯವಾಗಿ ಇಷ್ಟೇ ದಿನ ರಜೆ ಕೊಡಬೇಕು ಅಂತ ಒತ್ತಾಯ ಮಾಡೋದು ಸರಿಯಲ್ಲ. ದಸರಾದ ಪ್ರಮುಖ ಹಬ್ಬದ ದಿನಗಳಲ್ಲಿ ಶಾಲೆಗಳು ರಜೆ ನೀಡುತ್ತವೆ. ಆದರೆ 15-20 ದಿನ ರಜೆ ಕೊಡಿ ಅಂತ ಒತ್ತಾಯ ಮಾಡೋದು ಸರಿಯಲ್ಲ ಎಂದು ತಿಳಿಸಿದೆ.
ಕೆಲವು ಶಾಲೆಗಳು ಕ್ರಿಸ್ಮಸ್ಗೆ ಹೆಚ್ಚು ದಿನ ರಜೆ ನೀಡುತ್ತವೆ. ಇನ್ನೂ ಕೆಲವು ಶಾಲೆಗಳು ಪಠ್ಯ ಬೋಧನೆ ಮುಕ್ತಾಯ ಮಾಡುವ ಹಿನ್ನೆಲೆಯಲ್ಲಿ ತರಗತಿ ನಡೆಸಲಿವೆ. ಹೀಗಾಗಿ ಆಯಾ ಶಾಲೆಗಳಿಗೆ ಅನುಕೂಲವಾಗುವ ರೀತಿ ದಸರಾ ರಜೆ ನೀಡಲು ಅವಕಾಶ ಕೊಡಬೇಕು ಎಂದು ಸರ್ಕಾರಕ್ಕೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕ್ಯಾಮ್ಸ್ ಒತ್ತಾಯ ಮಾಡಿದೆ.