ಬೀದರ್ (ಅ.03): ಕೇಂದ್ರ ಸಚಿವರಾಗಿರುವ ಹೆಚ್.ಡಿ ಕುಮಾರಸ್ವಾಮಿರವರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥರಾಗಿರುವ ಎಡಿಜಿಪಿ ಎಮ್. ಚಂದ್ರಶೇಖರ್ ರವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಬೀದರ್ ನಗರದ ಗಣೇಶ ಮೈದಾನದ ಬಳಿಯ ಜೆಡಿಎಸ್ ಜಿಲ್ಲಾ ಕಛೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೂ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಜೆಡಿಎಸ್ ನಾಯಕರು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷರಾಗಿರುವ ರಮೇಶ್ ಪಾಟೀಲ್ ಸೋಲ್ಪೂರ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ನಾಯಕರು, ಭ್ರಷ್ಟಾಚಾರ, ದುರ್ನಡತೆ ಮತ್ತು ಮುಂತಾದ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥರಾಗಿರುವ ಎ.ಡಿ.ಜಿ.ಪಿ ಎಮ್.ಚಂದ್ರಶೇಖರವರನ್ನು ಕೂಡಲೇ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತ್ತು ಮಾಡಬೇಕು.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ಎಮ್.ಚಂದ್ರಶೇಖರ್ ರವರು ಕರ್ನಾಟಕ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ 1998ನೇ ಬ್ಯಾಚಿನ ಕೇಡರ್ ಅಧಿಕಾರಿಯಾಗಿದ್ದು, ಜೆಡಿಎಸ್ ನಾಯಕರು, ಕೇಂದ್ರ ಸಚಿವರಾಗಿರುವ ಹೆಚ್.ಡಿ. ಕುಮಾರಸ್ವಾಮಿರವರ ಬಗ್ಗೆ ಅವಹೇಳನಕಾರಿಯಾಗಿ, ಅತಿ ಕೆಟ್ಟ ಪದ ಬಳಕೆ ಮಾಡಿದ್ದಾರೆ.ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು ಹಾಗೂ ರೈತರ ಕಣ್ಮಣಿಯಾದ ಇವರಿಗೆ ಅವಮಾನ ಮಾಡಿ ಮಾತನಾಡಿದ ಈ ದುರ್ನಡತೆಯ ಅಧಿಕಾರಿಯನ್ನು ಕೂಡಲೇ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತ್ತು ಮಾಡಲು ಆಗ್ರಹಿಸುತ್ತೇವೆ ಎಂದು ಬರೆದಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ನಾಯಕರು, ಎಮ್ ಚಂದ್ರಶೇಖರ್ ರವರನ್ನು ಕೂಡಲೇ ಅಮಾನತು ಮಾಡದಿದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡುತ್ತೇವೆ. ತಾಲೂಕು, ಗ್ರಾಮೀಣ ಭಾಗದಲ್ಲಿ ಕೂಡ ಪ್ರತಿಭಟನೆ ನಡೆಸುತ್ತೇವೆ. ಅವರನ್ನು ಕೂಡಲೇ ಅಮಾನತು ಮಾಡಬೇಕು. ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿರುವ ರಮೇಶ್ ಪಾಟೀಲ್ ಸೋಲ್ಪೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಗೆ, ಪ್ರಮುಖರಾದ ದೇವೇಂದ್ರ ಸೋನಿ,
ರಾಜು ಕಡ್ಯಾಳ, ಐಲಿಂಜಾನ್ ಮಠಪತಿ, ಎಮ್.ಡಿ ಅಸೋದುದ್ದೀನ್, ಸಜ್ಜದ್ ಸಾಹೇಬ್, ರಾಜಶೇಖರ ಜವಳೆ, ಬೊಮಗೊಂಡ ಚಿಟ್ಟಾವಾಡಿ, ಲಲಿತಾ ಕರಂಜಿ, ಅಭಿ ಕಾಳೆ, ಬಸವರಾಜ ಹಾರುಗೇರಿ, ಮಕ್ಸೂದ್ ಹಲಿ, ಶಿವಪುತ್ರ ಮಾಳಗೆ, ಪ್ರಲ್ಹಾದ್ ಚಿಟ್ಟಾವಾಣಿ, ಸಂಗು ಚಿದ್ರಿ, ರಾಜು ಚಿಂತಾಮಣಿ, ಅರುಣಕುಮಾರ್ ಎಸ್ ಹೊಸಪೇಟೆ, ಬಸವರಾಜ್ ಶಾಪೂರ್, ರವಿಕುಮಾರ್ ಎಸ್.ಎನ್ ಸಿರ್ಸಿ, ಪ್ರಶಾಂತ ವಿಶ್ವಕರ್ಮ, ಮಹಮ್ಮದ್ ಸಲಿಂ ಚಿಕನ್, ಜಗದೇವಿ ಮೇತ್ರಿ, ಶಾಂತಮ್ಮ, ನಾಗಮ್ಮ, ಲಕ್ಷ್ಮಣ್ ಗಾದಗಿ, ಚಂದಪ್ಪ, ಹಿರಾಮಣಿ ಬುದೇರಾ, ಶಿವಾಜಿ ಬರೂರ, ಸಂಜು ಬರೂರ, ಶಿವರಾಜ ಬಗದಲ್, ಗುರುದಾಸ್ ಕೋಳಾರ ಕೆ, ಜಾನ್ಸನ್, ಅಂಬಾದಾಸ ಸೋನಿ ಸೇರಿದಂತೆ ಅನೇಕರಿದ್ದರು.