ಬೆಂಗಳೂರು: ಸಿಎಂ ರಾಜೀನಾಮೆಗೆ ವಿಪಕ್ಷಗಳ ಒತ್ತಾಯ ಹಾಗೆ ಮುಡಾ ಕೇಸ್ ನಲ್ಲಿ ಇಡಿ ಎಂಟ್ರಿ ಬೆನ್ನಲ್ಲೇ ಅಲರ್ಟ್ ಸಿದ್ದರಾಮಯ್ಯ ಪರ ಹೋರಾಟಕ್ಕೆ ಆಪ್ತ ನಾಯಕರು ಪ್ಲ್ಯಾನ್ ಖಾಸಗಿ ಹೋಟೆಲ್ ನಲ್ಲಿ ಹಿಂದುಳಿದ ವರ್ಗಗಳ ನಾಯಕರ ಸಭೆ
ಸಚಿವ ಭೈರತಿ ಸುರೇಶ್, ಸಂತೋಷ್ ಲಾಡ್ ಸೇರಿ ಹಲವರು ಭಾಗಿಯಾಗಿದ್ದು ಸಚಿವರ ಜೊತೆ ಹಲವು ಶಾಸಕರು ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಾಗುತ್ತಿದೆ.
ಮುಡಾ ಕೇಸ್ ನಲ್ಲಿ ಸಿಎಂ ವಿರುದ್ದ ಇಡಿ ಇಸಿಐಆರ್ ದಾಖಲು ಕೇಂದ್ರ ಹಾಗೂ ವಿಪಕ್ಷಗಳ ವಿರುದ್ದ ಹೋರಾಟಕ್ಕೆ ರಣತಂತ್ರ ಈ ಮಧ್ಯೆ ಸಿಎಂ ಸ್ಥಾನದ ಆಕಾಂಕ್ಷಿಗಳಿಂದ ರಹಸ್ಯ ಸಭೆ ಡಿಕೆಶಿ, ದಲಿತ ನಾಯಕರ ರಹಸ್ಯ ಸಭೆಗಳಿಂದ ಎಚ್ಚೆತ್ತ ಸಿದ್ದು ಪಡೆ
ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ, ಎಂ ವೈ ಪಾಟೀಲ್, ಕಡೂರು ಶಾಸಕ ಎಎಸ್ ಆನಂದ್, ತರೀಕೆರೆ ಶಾಸಕ ಶ್ರೀನಿವಾಸ್, ಶಾಸಕ ರಾಘವೇಂದ್ರ ಹಿಟ್ನಾಳ್, ಎಂಎಲ್ ಸಿ ಶ್ರೀನಿವಾಸ್, ಹೆಚ್ ಎಂ ರೇವಣ್ಣ ಸೇರಿ ಕುರುಬ ಹಾಗೂ ಹಿಂದುಳಿದ ಸಮುದಾಯಗಳ ನಾಯಕರು ಭಾಗಿ