ಹುಬ್ಬಳ್ಳಿ: ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಾವೆಲ್ಲ ಒಂದಾಗಿ ಇದ್ದೇವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಹುಬ್ಬಳ್ಳಿ ಶ್ರೀ ಸಿದ್ದಾರೂಢ ಮಠಕ್ಕೆ ಬೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪ್ರಧಾನಿ ಅವರ ದೂರದೃಷ್ಟಿ, ಚಿಂತನೆ, ಅಭಿವೃದ್ದಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಇದರ ನಡುವೆ ಪಕ್ಷದಲ್ಲಿ ಸಣ್ಣ ಪುಟ್ಟ ಭಾವನೆ ಏನಾದರೂ ಇದ್ದಲ್ಲಿ ನನಗೆ ಗೊತ್ತಿಲ್ಲ ಎಂದರು.
ಸಚಿವ ದಿನೇಶ ಗುಂಡೂರಾವ್ ಅವರು ಮಾಜಿ ಸಿಎಂ ಗುಂಡೂರಾವ್ ಅವರ ಮಗ ಎಂಬ ಬಗ್ಗೆ ಗೌರವವಿದೆ. ವೀರ ಸಾವರ್ಕರ್ ಬಗ್ಗೆ ಯಾವ ದೃಷ್ಟಿಯಲ್ಲಿ ಅವರು ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ದಿನೇಶ ಗುಂಡುರಾವ್ ಇತಿಹಾಸ ತಿಳಿದುಕೊಂಡು ಮಾತನಾಡಲಿ ಎಂದು ಹೇಳಿದರು. ಸಿಎಂ ಆಗಲು ಸಾವಿರ ಕೋಟಿ ರೂ. ಇಟ್ಟಿರುವ ಮಹಾನ್ ನಾಯಕ ಯಾರೂ ಎಂಬುದು ನನಗೆ ಗೊತ್ತಿಲ್ಲ.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ಶಾಸಕ ಬಸನಗೌಡ ಪಾಟೀಲ ಯಾಕೆ ಹೀಗೆ ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲ. ಯಾರ ಮೇಲಾದರೂ ಸಿಟ್ಟು ಇದ್ದರೂ ನಾಲ್ಕು ಗೋಡೆ ಮಧ್ಯೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅನಾವಶ್ಯಕವಾಗಿ ಪಕ್ಷಕ್ಕೆ ಮುಜಗರವಾಗುವ ರೀತಿ ಮಾತನಾಡಬಾರದು ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ನಡೆದು ಬಂದ ದಾರಿ ನೆನಪು ಮಾಡಿಕೊಳ್ಳಲಿ. ಸಿದ್ದರಾಮಯ್ಯ ಅವರು ಮಾದರಿ ರಾಜಕಾರಣಿ ಎಂದಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಇತಿಹಾಸದಲ್ಲಿ ಉಳಿದುಕೊಳ್ಳಿ ಎಂದರು.
ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದ ಸಚಿವರು
ಇದಕ್ಕೋ ಮುನ್ನ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಗದ್ದುಗೆ ದರ್ಶನ ಪಡೆದರು.ಹಳೆ ಹುಬ್ಬಳ್ಳಿಯಲ್ಲಿನ ಶ್ರೀ ಸಿದ್ಧಾರೂಢ ಮಠ ಇದ್ದು ಶ್ರೀ ಸಿದ್ಧಾರೂಢ, ಶ್ರೀ ಗುರುನಾಥ ರೂಢರ ಗದ್ದುಗಿಗೆ ದರ್ಶನ ಪಡೆದು ಮಠದ ಪರಂಪರೆಯ ಕುರಿತು ಮಾಹಿತಿ ಪಡೆದುಕೊಂಡರು.ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಮಠಗಳಲ್ಲಿ ಶ್ರೀ ಸಿದ್ಧಾರೂಢ ಮಠ ಒಂದಾಗಿದ್ದು ಶಾಸಕ ಮಹೇಶ್ ಟೆಂಗಿನಕಾಯಿ, ಮಠದ ಟ್ರಸ್ಟ್ ಸಮಿತಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಟ್ರೆಸ್ಟಿ ಪದಾಧಿಕಾರಿಗಳು ಬಿಜೆಪಿ ಪದಾಧಿಕಾರಿಗಳುಪ್ರಮುಖರು ಭಾಗಿಯಾಗಿದ್ದರು.