ರಾಯಚೂರು: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಹುಲಿಗೇಪ್ಪ(20) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, .ಜಮೀನಿನ ವಿಚಾರಕ್ಕೆ ಅತ್ತೆ-ಅಳಿಯನ ನಡುವೆ ಜಗಳವಾಗಿತ್ತು..ಅತ್ತೆ ಹಾಗೂ ಆಕೆ ಕಡೆಯವರ ಬೆದರಿಕೆಗೆ ಮನನೊಂದು ವಿಷ ಸೇವಿಸಿ 20 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾನೆ.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ಡೆತ್ ನೋಟ್ನಲ್ಲಿ ಜಾಗದ ವಿಚಾರವಾಗಿ ಅತ್ತೆ ಲಕ್ಷ್ಮಿ, ಅತ್ತೆಯ ಮಗಳ ಅನುರಾಧ, ಮಹಾದೇವಿ, ಅನಿಲ್ ಎಂಬುವವರ ಹೆಸರು ಪ್ರಸ್ತಾಪ ಮಾಡಿದ್ದಾನೆ. ನನ್ನ ಸಾವಿಗೆ ನನ್ನ ಅತ್ತೆ ಲಕ್ಷ್ಮಿದೇವಿ ಮತ್ತು ಆಕೆಯ ಮಕ್ಕಳೇ ಕಾರಣ. ನಮ್ಮ 17 ಗುಂಟೆ ಜಾಗ ತಮ್ಮದು ಎಂದು ನಮಗೆ ಬೆದರಿಕೆ ಹಾಕಿದ್ದಾರೆ. ನನ್ನ ಸಾವಿನ ಬಳಿಕವಾದರೂ ನಮ್ಮ ಜಾಗ ನಮಗೆ ಕೊಡಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.