ಹಜಾರೆ ಬಂಧುಗಳ ವೃತ್ತಿಪರತೆ,ಕಾರ್ಯದಕ್ಷತೆ ಹಾಗೂ ದೂರದೃಷ್ಟಿಯ ಫಲವಾಗಿ ರಬಕವಿಯಲ್ಲಿ ಇಂದು ದೇಶದ ಪ್ರಮುಖ ಉದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ.ಅವರು ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವ ಹಾಗೆ ಅವರು ಅದ್ಭುತ ಯಶಸ್ಸು ಸಾಧಿಸಿದ್ದಾರೆ.ಇದಕ್ಕೆಲ್ಲ ಅವರ ಔದ್ಯೋಗಿಕ ನೈಪುಣ್ಯತೆಯೇ ಕಾರಣವಾಗಿದೆ.
ಉದ್ಯಮ ಕ್ಷೇತ್ರವನ್ನು ಅವರು ವಿಸ್ತರಿಸುತ್ತ ಸಾಗಿದ್ದು ಇದರಿಂದಾಗಿ ಈ ಭಾಗದ ಯುವಕರಿಗೆ ಉದ್ಯೋಗ ಕೂಡ ಸೃಷ್ಟಿ ಯಾಗುತ್ತಿದೆ.ಇದು ದೇಶಕ್ಕೆ ಹಜಾರೆ ಬಂಧುಗಳ ಪರೋಕ್ಷ ಕೊಡುಗೆಯಾಗಿದೆ ಎಂದು ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಟ್ಟಿ ತಾಲೂಕಿನ ರಬಕವಿಯಲ್ಲಿ ಹಜಾರೆ ಬಜಾರ್ ಉದ್ಘಾಟನೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ಗಣಪತರಾವ ಹಜಾರೆ. ಸುರೇಶ ಅಂಗಡಿ. ಎಂ ಬಿ ನಾಶಿ. ಸತೀಶ ಹಜಾರೆ. ಪ್ರಕಾಶ ದೇಸಾಯಿ. ರಬಕವಿ ಬನಹಟ್ಟಿ ನಗರಸಭಾ ಅಧ್ಯಕ್ಷರು ಶ್ರೀಮತಿ ವಿದ್ಯಾ ದವಾಡಿ. ಶ್ರೀಶೈಲ ದವಾಡಿ. ಸಂಜಯ ತೆಗ್ಗಿ. ಧರಪ್ಪ ಉಳ್ಳಾಗಡ್ಡಿ. ರಾಮಣ್ಣ ಹುಲಕುಂದ. ನೀಲಕಂಠ ಮುತ್ತೂರು. ಸುರೇಶ ಚಿಂಡಕ. ಸತ್ಯಪ್ಪ ಮಗದುಮ. ಪರಪ್ಪ ಬೆಳ್ಳೂರು. ಪ್ರವೀಣ ಹಜಾರೆ. ಪ್ರಸನ್ನ ಹಜಾರೆ. ದೀಪಕ ಹಜಾರೆ. ಡಾ. ಮಹಾವೀರ ದಾನಿಗೊಂಡ ಡಾ. ಬಸವರಾಜ ಡಂಗಿ. ಡಾ.ಅಭಿನಂದನ ಡೋರ್ಲೆ ಸೇರಿದಂತೆ ರಬಕವಿ ಬನಹಟ್ಟಿ ರಾಂಪುರ ಹೊಸೂರ ಮಾಲಿಂಗಪುರ ಎಲ್ಲಾ ಗ್ರಾಮಗಳ ಹಿರಿಯರು ಮುಖಂಡರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ