ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ನಾಯಕರ ವಿರುದ್ಧ ಹಗರಣ ಆರೋಪ, ದೂರುಗಳು ಕೇಳಿ ಬಂದಿದ್ದು ಇದೀಗ ಮಾಜಿ ಸಿಎಂ ಎಚ್ .ಡಿ ಕುಮಾರಸ್ವಾಮಿ ವಿರುದ್ಧ ದೂರು ಕೇಳಿ ಬಂದಿದೆ.
ಹೌದು .. ಉದ್ಯಮಿ ವಿಜಯ ಟಾಟಾರಿಂದ ಐವತ್ತು ಕೋಟಿ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿರುವ ಆರೋಪ ಹೊರಿಸಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ (Union Minister) ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೇಂದ್ರದಿಂದ ರೈತರಿಗೆ ಗುಡ್ ನ್ಯೂಸ್: ಈ ಯೋಜನೆಯಿಂದ ಸಿಗುತ್ತೆ ಪ್ರತಿ ತಿಂಗಳು 3 ಸಾವಿರ ರೂ.
ಉದ್ಯಮಿ ವಿಜಯ್ ಟಾಟಾ ದೂರಿನ ಅಂಶಗಳು
ನಾನು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದೇನೆ2018 ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ ಹೆಚ್.ಡಿ.ದೇವೆಗೌಡರು ಪಕ್ಷದ ಸೋಷಿಯಲ್ಮೀಡಿಯಾ ಉಪಾಧ್ಯಕ್ಷನಾಗಿ ನನ್ನನ್ನು ನೇಮಿಸಿದರು 2019 ರ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ಪರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಯಾನ ನಡೆಸಿದ್ದೇನೆ
ಕಳೆದ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ಗಮನಹರಿಸಿದ್ದೆ ಪಕ್ಷದ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಆಗಸ್ಟ್ 24 2024 ರಂದು ರಮೇಶ್ ಗೌಡ ನನ್ನ ನಿವಾಸಕ್ಕೆ ಆಗಮಿಸಿದ್ದರು ನನ್ನ ಮನೆಯಲ್ಲಿ ಜೊತೆಯಲ್ಲಿ ಊಟ ಮಾಡುತ್ತ ಚೆನ್ನಪಟ್ಟಣ ಚುನಾವಣೆ ಬಗ್ಗೆ ವಿವರಿಸಿದರು
ನಿಖಿಲ್ ಕುಮಾರಸ್ವಾಮಿಯವರಿಗೆ ಚೆನ್ನಪಟ್ಟಣ ಚುನಾವಣೆಗೆ ಟಿಕೆಟ್ ನೀಡುವುದು ಅಂತಿಮವಾಗಿದೆ ಎಂದ್ರು ಇದೇ ವೇಳೆ ಕುಮಾರಸ್ವಾಮಿ ಪೋನ್ ಮಾಡಿದ್ರು ನಿಖಿಲ್ ಚನ್ನಪಟ್ಟಣ ಚುನಾವಣೆಗೆ ನಿಲ್ತಿದ್ದಾರೆ ಚುನಾವಣೆಗೆ ಐವತ್ತು ಕೋಟಿ ಕೊಡಿ ಅಂದ್ರು ಈ ವೇಳೆ ಆಗಲ್ಲ ಸರ್ ಅಂತೇಳ್ದೆ ಅದಕ್ಕೆ ಕುಮಾರಸ್ವಾಮಿ ಕೋಪ ಮಾಡ್ಕೊಂಡ್ರು ನೀವು ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ನಡೆಸೋದಷ್ಟೇ ಅಲ್ಲ. ಬದುಕುವುದೇ ಕಷ್ಟವಾಗತ್ತೆ ಅಂತ ಬೆದರಿಕೆ ಹಾಕಿ ಪೋನ್ ಕಟ್ ಮಾಡಿದ್ರು
ನಿಮ್ಮ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಕಂಪ್ಲೀಟ್ ಮಾಡಲಿಕ್ಕೆ ಬಿಡೊಲ್ಲ ಅಂದ್ರು ಕುಮಾರಸ್ವಾಮಿ ಜೊತೆ ಪೋನ್ ನಲ್ಲಿ ಮಾತಾಡುವ ವೇಳೆ ರಮೇಶ್ ಗೌಡ ಎದುರಲ್ಲಿ ಕುಳಿತಿದ್ರು ಈ ವೇಳೆ ರಮೇಶ್ ಗೌಡ ಕೂಡ ಐದು ಕೋಟಿ ಕೇಳಿದ್ರು ದೇವಾಲಯ ಹಾಗೂ ಶಾಲೆ ಕಟ್ಟಿಸುತ್ತಿದ್ದು ಅದಕ್ಕಾಗಿ ಐದು ಕೋಟಿ ಕೊಡಿ ಅಂತ ರಮೇಶ್ ಗೌಡ ಕೇಳಿದ್ರು ತುಂಬಾ ಕಷ್ಟ ಇದೆ ಯಾವುದೇ ಕಾರಣಕ್ಕೂ ಆಗಲ್ಲ ಅಂತೇಳ್ದೆ ಎಂದು ದೂರು ನೀಡಿದ್ದಾರೆ.