ದೆಹಲಿ:– ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ವೈದ್ಯರೊಬ್ಬರು ಸಾವನ್ನಪ್ಪಿದ ಘಟನೆ ದೆಹಲಿಯ ನಿಮಾ ಆಸ್ಪತ್ರೆಯಲ್ಲಿ ಜರುಗಿದೆ.
ಅಕ್ರಮವಾಗಿ ಚೀನಾಗೆ ಚಿಪ್ಪು ಹಂದಿ ಸಾಗಾಟ: ಆರೋಪಿಗಳ ಎಡೆಮುರಿ ಕಟ್ಟಿದ ಪೊಲೀಸ್!
ರೋಗಿಗಳಂತೆ ಬಂದಿದ್ದ ಇಬ್ಬರಿಂದ ಈ ಕೃತ್ಯ ನಡೆದಿದೆ. ಘಟನೆ ಕುರಿತು ಆಸ್ಪತ್ರೆ ಸಿಬ್ಬಂದಿ ಮಾತನಾಡಿ, ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಗೆ ಬಂದಿದ್ದರು, ಚಿಕಿತ್ಸೆ ಪಡೆದ ಬಳಿಕ ವೈದ್ಯರನ್ನು ಭೇಟಿಯಾಗಲೇಬೇಕು ಎಂದು ಮನವಿ ಮಾಡಿದರು, ವೈದ್ಯರ ಕ್ಯಾಬಿನ್ಗೆ ಪ್ರವೇಶಿಸಿದಾಗ ವೈದ್ಯರನ್ನು ಹತ್ಯೆ ಮಾಡಿದ್ದಾರೆ.
ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ವೈದ್ಯರು ತಮ್ಮ ಸುರಕ್ಷತೆ ಮತ್ತು ಭದ್ರತೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಈ ಘಟನೆ ವರದಿಯಾಗಿದೆ.