ಚಾಮರಾಜನಗರ : ಇಂದು ಮಹಾಲಯ ಅಮಾವಾಸ್ಯೆ ಹಿನ್ನಲೆ ಲಕ್ಷಾಂತರ ಮಂದಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಇನ್ನು ಅಮಾವಾಸ್ಯೆ ದಿನದಂದು ಮಾದಪ್ಫನ ದರ್ಶನ ಪಡೆದು ಬೇಡಿಕೊಂಡರೆ ಅಂದುಕೊಂಡ ಕೆಲಸಗಳು ನೆರವೇರಲಿದೆ ಎಂಬ ಪ್ರತೀತಿಯಿದೆ. ಈ ಹಿನ್ನಲೆ ಇಂದು ವಿಶೇಷವಾಗಿ ಮಾದಪ್ಪನ ದರ್ಶನ ಪಡೆದು ಭಕ್ತರು ಪುನೀತರಾದರು.
ಇಂದು ಮಹಾಲಯ ಅಮಾವಾಸ್ಯೆ ಹಿನ್ನಲೆ ಮಲೆ ಮಹದೇಶ್ವರ ಪ್ರಾಧಿಕಾರ ವಿಶೇಷವಾಗಿ 2 ಲಕ್ಷ ಲಾಡುಗಳನ್ನ ತಯಾರಿಸಿಲಾಗಿತ್ತು. ಜೊತೆಗೆ ಎರೆಡುವರೆ ಲಕ್ಷದಷ್ಟು ಜನರಿಗೆ ಉಚಿತ ಅನ್ನದಾಸೋಹ ಮಾಡಲಾಯ್ತು.
ಇಂದು ಮುಂಜಾನೆ ನಾಲ್ಕು ಗಂಟೆಯಿಂದಲೇ ಮಾದಪ್ಪನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯ್ತು, ಇನ್ನು ಭಕ್ತರಿಗೆ ಅನುಕೂಲವಾಗಲು ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರದಿಂದ ಹೆಚ್ಚುವರಿ ಬಸ್ಗಳ ವ್ಯವಸ್ಥೆಯನ್ನ ಸಾರಿಗೆ ಇಲಾಖೆ ಮಾಡಿತ್ತು.
ಮಹಾಲಯ ಅಮಾವಾಸ್ಯೆ ಹಿನ್ನಲೆ ಇಂದು ಮಾದಪ್ಪನ ಬಳಿ ತಮ್ಮ ಹರಕೆ ಕಟ್ಟಿಕೊಂಡರೆ, ಬೇಡಿಕೊಂಡ ಇಷ್ಟಾರ್ಥ ಸಿದ್ದಿಸುತ್ತೆ ಎಂಬ ವಾಡಿಕೆಯಿದೆ. ಇದರಿಂದಾಗಿ ಇಂದು ಭಕ್ತರ ದಂಡು ಬೆಟ್ಟಕ್ಕೆ ಆಗಮಿಸಿ ಪುನೀತರಾದರು.