ಬೆಂಗಳೂರು:- ಮುಡಾ ಆಯುಕ್ತರನ್ನು ಅರೆಸ್ಟ್ ಮಾಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
Hubballi: ಅಹಿಂದ ಸಂಘಟನೆ ವತಿಯಿಂದ ಅಹಿಂದ ನಾಯಕರನ್ನ ಉಳಿಸಿ ಜಾಥಾಕ್ಕೆ ತಯಾರಿ!
ಮೊದಲ ಮೂಡಾ ಆಯುಕ್ತರನ್ನ ಬಂಧಿಸಬೇಕು. ಅವರು ಯಾವ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ ಪತ್ನಿಗೆ ನೀಡಿರುವ ಸೈಟುಗಳನ್ನ ವಾಪಸ್ ಪಡೆದರು ಅನ್ನೋದು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮೂಡಾ ಸೈಟ್ ವಿಚಾರದಲ್ಲಿ ಅಧಿಕಾರಿಗಳು ಸಿಎಂ ಪರ ಕೆಲಸ ಮಾಡ್ತಿದ್ದಾರೆ. ಕೋರ್ಟ್ನಲ್ಲಿ 62 ಕೋಟಿ ಬೆಲೆ ಬಾಳುವ ಜಾಗವದು, ನಮಗೆ 62 ಕೋಟಿ ನೀಡಿ ಜಾಗ ವಾಪಸ್ ಪಡೆಯಿರಿ ಅಂತಾ ಹೇಳಿದ್ದು, ಈಗ ತನಿಖೆಯ ದಿಕ್ಕು ತಪ್ಪಿಸಲು ಸೈಟ್ ವಾಪಸ್ ಕೊಡೋ ಡ್ರಾಮವನ್ನ ಮಾಡಿದ್ದಾರೆ. ಕೋರ್ಟ್ನಲ್ಲಿ ಕೇಸ್ ಇದೆ. ಮೂಡಾ ಆಯುಕ್ತರು ಯಾವ ಆಧಾರದ ಮೇಲೆ ಕೇಸ್ ವಾಪಸ್ ಪಡೆದ್ರು ಅನ್ನೋದು ತನಿಖೆಯಾಗಬೇಕು. ಲೋಕಾಯುಕ್ತದವರು ಮೊದಲು ಮೂಡಾ ಆಯುಕ್ತರನ್ನ ಬಂಧಿಸಬೇಕು, ಜಾರಿ ನಿರ್ದೇಶನಾಲಯವು ಮುಡಾ ವಿಚಾರದಲ್ಲಿ ತನಿಖೆ ಶುರು ಮಾಡ್ತಿದ್ದಂತೆ ಈ ರೀತಿ ಯಾಕೆ ಮಾಡಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.
ಹಣ ಅಕ್ರಮ ವರ್ಗಾವಣೆ ಆಗಿಲ್ಲ ಅಂತಿದ್ದಾರೆ. 62 ಕೋಟಿ ಅಂದಿದ್ದು ಯಾರು? ನನ್ನ ರಾಜೀನಾಮೆ ಯಾಕ್ ಕೇಳ್ತಾರೆ? ನನ್ನನ್ನ ಏನೂ ಮಾಡಲು ಆಗಲ್ಲ. ನಿನ್ನೆ ಕೂಡ ನನ್ನ ಮೇಲೆ ಎಫ್ಐಆರ್ ಆಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ