ಹುಬ್ಬಳ್ಳಿ : ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಮತ್ತು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಮಹಾ ಅಧಿವೇಶನಕ್ಕೆ 100ವರ್ಷ ಪೂರೈಸಿದ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಕಿಮ್ಸ್ ಆಸ್ಪತ್ರೆ ಮುಖ್ಯದ್ವಾರದ ಬಳಿ ಇರುವ ಗಾಂಧಿ ಪ್ರತಿಮೆಯಿಂದ ವಿದ್ಯಾನಗರ ಮಹಿಳಾ ವಿದ್ಯಾಪೀಠದವರೆಗೆ ನಡೆದ ಪಾದಯಾತ್ರೆಯಲ್ಲಿ ನಡೆಸಲಾಯಿತು.
ವಿಪಕ್ಷ ನಾಯಕ ಅಶೋಕ್ ಗೆ ಬಿಗ್ ಶಾಕ್: ನೂರಾರು ಕೋಟಿ ಬೆಲೆಬಾಳುವ ಜಮೀನಿನ ಹಗರಣದ ದಾಖಲೆ ಬಿಡುಗಡೆ!
ಈ ಸಂದರ್ಭದಲ್ಲಿ ಗಾಂಧಿ ನಡಿಗೆ ಸಮಾರೋಪಗೊಳಿಸಿ ಮಾತನಾಡಿದ ಶಾಸಕ ಅಬ್ಬಯ್ಯಾ ಪ್ರಸಾದ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ರಾಮ ರಾಜ್ಯದ ಕನಸು ಕಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಜಾತಿ, ಜಾತಿಗಳ ಮಧ್ಯೆ ಧರ್ಮ, ಧರ್ಮದ ಮಧ್ಯೆ ವಿಷ ಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೊಡ್ಡ ಕುತಂತ್ರವೇ ನಡೆಯುತ್ತಿದೆ. ಜನರು ಕೂಡ ಅದಕ್ಕೆ ಬಲಿಯಾಗುತ್ತಿದ್ದಾರೆ. ಇದು ತುಂಬ ಕಳವಳಕಾರಿ ಎಂದು ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಕಳವಳ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿ ತತ್ವವನ್ನೇ ಪಾಲಿಸದ ಬಿಜೆಪಿಗರು ಇತ್ತೀಚೆಗೆ ಬೆಂಗಳೂರಿನ ವಿಧಾನಸೌಧದ ಬಳಿ ಇರುವ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ ಎಂದು ಟೀಕಿಸಿದರು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ. ಮೊದಲು ಆಡಳಿತ ಪಕ್ಷದವರು ವಿರೋಧ ಪಕ್ಷದವವರ ವಿಶ್ವಾಸ ತೆಗೆದುಕೊಂಡು ಅವರಿಗೆ ಗೌರವ ನೀಡಿ ದೇಶದ ಉನ್ನತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಇತ್ತೀಚಿಗೆ ವಿರೋಧ ಪಕ್ಷದವರನ್ನು ದೇಶದ ಶತ್ರುಗಳಂತೆ ಮಾಡಲಾಗುತ್ತಿದೆ. ದ್ವೇಷ, ಸೇಡು ಪರಸ್ಪರ ಮಾತನಾಡದೆ ಇರುವ ಮಟ್ಟಿಗೆ ಬಂದಿದೆ. ಇದು ದೇಶದ ಹಿತಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
ಕೆಪಿಸಿ ಉಪಾಧ್ಯಕ್ಷ ಸಯೀದ್ ಅಹ್ಮದ್, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಸಂಸದ ಐ.ಜಿ.ಸನದಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಡಿಸಿಸಿ ಉಭಯ ಘಟಕಗಳ ಅಧ್ಯಕ್ಷರಾದ ಅಲ್ತಾಫಹುಸೇನ ಹಳ್ಳೂರ, ಅನಿಲಕುಮಾರ ಪಾಟೀಲ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಕಾಂಗ್ರೆಸ್ ಮುಖಂಡರಾದ ಸತೀಶ ಮಹೆರವಾಡೆ, ರಜತ ಉಳ್ಳಾಗಡ್ಡಿಮಠ, ರಾಜಶೇಖರ ಮೆಣಸಿನಕಾಯಿ, ರಾಜೇಶ್ವರಿ ಪಾಟೀಲ್, ಬಂಗಾರೇಶ ಹಿರೇಮಠ, ಅಲ್ತಾಫ ಕಿತ್ತೂರ, ಮೋಹನ ಹಿರೇಮನಿ, ಶರೀಫ ಗರಗದ, ಅಬ್ದುಲ್ ಗನಿ, ಆರೀಫ ಭದ್ರಾಪೂರ, ಸಂದೀಲ್ ಕುಮಾರ ಹಾಗೂ ಇತರರು ಇದ್ದರು.