ನೀರಜ್ ಚೋಪ್ರಾ ತಾಯಿಗೆ ಪತ್ರ ಬರೆದು ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಬುಧವಾರ ನೀರಜ್ ಚೋಪ್ರಾ ಅವರ ತಾಯಿ ಮಾಡಿದ ಚುರ್ಮಾ ಸಿಹಿ ತಿಂಡಿಯನ್ನು ಪ್ರಧಾನಿ ಮೋದಿಗೆ ನೀಡಿದ್ದರು. ನಾನು ಹಾಗೂ ನೀರಜ್ ಆಗಾಗ್ಗೆ ಚುರ್ಮಾ ಬಗ್ಗೆ ಚರ್ಚಿಸುತ್ತೇವೆ. ಆದರೆ ಅದನ್ನು ಸೇವಿಸಿದ ನಂತರ ನಾನು ಭಾವುಕನಾಗಿದ್ದೇನೆ. ಈ ಪ್ರೀತಿ ತುಂಬಿದ ಉಡುಗೊರೆ ನನಗೆ ನನ್ನ ತಾಯಿ ನೆನಪಾದರು ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
RDCC ಬ್ಯಾಂಕ್ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ಆಗಿರೋದು ಕನ್ಫರ್ಮ್: ತನಿಖೆಯಲ್ಲಿ ಮ್ಯಾನೇಜರ್ ಕಳ್ಳಾಟ ಬಯಲು!
ನಿನ್ನೆ ಜಮೈಕಾದ ಪ್ರಧಾನಿಯವರ ಭೇಟಿಯ ಸಂದರ್ಭದಲ್ಲಿ ಆಯೋಜಿಸಿದ್ದ ಭೋಜನಾ ಕೂಟದಲ್ಲಿ ನಾನು ನೀರಜ್ ಭಾಯ್ (ನೀರಜ್ ಚೋಪ್ರಾ) ಅವರನ್ನು ಭೇಟಿಯಾದೆ. ನೀವು (ಸರೋಜಾ ದೇವಿ) ತಯಾರಿಸಿದ ಚುರ್ಮಾವನ್ನು ಅವರು ನನಗೆ ನೀಡಿದಾಗ ತುಂಬಾ ಸಂತೋಷವಾಯಿತು. ತಾಯಿ ಧೈರ್ಯ, ಪ್ರೀತಿ ಮತ್ತು ಸಮರ್ಪಣೆಯ ಸಾಕಾರಮೂರ್ತಿ. ನವರಾತ್ರಿಯ ಒಂದು ದಿನ ಮುಂಚಿತವಾಗಿ ನನಗೆ ಈ ಊಟ ಸಿಕ್ಕಿದ್ದು ಕಾಕತಾಳೀಯ. ನಾನು ನವರಾತ್ರಿ ದಿನಗಳಲ್ಲಿ ಉಪವಾಸ ಮಾಡುತ್ತೇನೆ ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ನೀರಜ್ಗೆ ಪದಕಗಳನ್ನು ಗೆಲ್ಲಲು ನೀವು ನೀಡುವ ಆಹಾರ ಸಹಾಯ ಮಾಡಿದಂತೆ, ಈ ಚುರ್ಮಾ ಮುಂದಿನ ಒಂಬತ್ತು ದಿನಗಳವರೆಗೆ ರಾಷ್ಟ್ರದ ಸೇವೆ ಮಾಡಲು ನನಗೆ ಸಹಾಯ ಮಾಡಲಿದೆ. ಈ ಮೂಲಕ ಪ್ರಧಾನಿ ಮೋದಿ ಅವರು ನೀರಜ್ ಚೋಪ್ರಾ ತಾಯಿಗೆ ಚುರ್ಮಾ ಕಳುಹಿಸಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ
ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಿಮ್ಮ ಮನೆಯಲ್ಲಿ ತಯಾರಿಸಿದ ‘ಚುರ್ಮಾ’ (ಹರಿಯಾಣದ ಜನಪ್ರಿಯ ಸಿಹಿ ತಿಂಡಿ) ತಂದು ಕೊಡಬೇಕೆಂದು ತಿಳಿಸಿದ್ದರು. ಇದೇ ವೇಳೆ ಮುಂದಿನ ಬಾರಿ ತಂದು ಕೊಡುವುದಾಗಿ ನೀರಜ್ ಚೋಪ್ರಾ ಹೇಳಿದ್ದರು.