ನಿರುದ್ಯೋಗಿಗಳಿಗೆ ಸಿಹಿ ಸಿಕ್ಕಿದ್ದು, ಬರೋಬ್ಬರಿ 461 ಸರ್ಕಾರಿ ಹುದ್ದೆಗಳು ಖಾಲಿ ಇದೆ.
ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದ್ರೆ ಶುಗರ್-ಬಿಪಿಯೆಲ್ಲಾ ಹತ್ತಿರ ಸುಳಿಯಲ್ಲ!
ಎಸ್ ಕೊಪ್ಪಳದಲ್ಲಿ ಈ ಕೆಲಸ ಇದ್ದು, ಆಸಕ್ತರು ಕೂಡಲೇ ಅಪ್ಲೈ ಮಾಡಬಹುದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿ ಹಾಕಿದವರಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಸಂದರ್ಶನದ ಮೂಲಕ, ದಾಖಲೆ ಪರಿಶೀಲನೆ ನಡೆಸುವ ಮೂಲಕ ಮಾತ್ರ ನೇಮಕ ಮಾಡಿಕೊಳ್ಳಲಿದೆ.
ಉದ್ಯೋಗ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ
ಹುದ್ದೆಗಳ ಹೆಸರು:- ಕಾರ್ಯಕರ್ತೆ, ಸಹಾಯಕಿ
ಒಟ್ಟು ಹುದ್ದೆಗಳ ಸಂಖ್ಯೆ 461
ಅಂಗನವಾಡಿ ಸಹಾಯಕಿ ಹುದ್ದೆಗಳ:- ಸಂಖ್ಯೆ 374
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ಸಂಖ್ಯೆ:- 87
ಅಂಗನವಾಡಿ ಹುದ್ದೆಗಳಿಗೆ ಅರ್ಹತೆಗಳು:-
ಕಾರ್ಯಕರ್ತೆ ಹುದ್ದೆಗೆ 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ.
ಸಹಾಯಕಿ ಹುದ್ದೆಗೆ 10ನೇ ತರಗತಿ ಪಾಸ್.
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ದಾಟಿರಬೇಕು.
ಗರಿಷ್ಠ 35 ವರ್ಷ ವಯಸ್ಸು ದಾಟಿರಬಾರದು.
ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಅನ್ವಯವಾಗಲಿವೆ.
ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವರ್ಗಾವಾರು ವಯಸ್ಸಿನ ಸಡಿಲಿಕೆ ಅನ್ವಯವಾಗಲಿವೆ
ಅಂಗನವಾಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ
ವೆಬ್ ವಿಳಾಸ “karnemakaone.kar.nic.in/abcd/ApplicationForm_JA_org.aspx” ಕ್ಕೆ ಭೇಟಿ ನೀಡಿ.
ಹುದ್ದೆ ಬಯಸುವ ಜಿಲ್ಲೆ ಕೊಪ್ಪಳ >> ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) >> ಅಧಿಸೂಚನೆ ಸಂಖ್ಯೆ >> ಹುದ್ದೆ ಆಯ್ಕೆ ಮಾಡಿ.
ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿ.
ಆನ್ಲೈನ್ ಅರ್ಜಿ ನಮೂನೆ ವೆಬ್ಪೇಜ್ ತೆರೆಯುತ್ತದೆ.
ಕೇಳಲಾದ ಸಂಪೂರ್ಣ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್ ಸಲ್ಲಿಸಿ.