ಬೆಂಗಳೂರು:- ಸಿಎಂ ಪತ್ನಿ ಪಾರ್ವತಿಯಿಂದ ಮುಡಾ ಸೈಟ್ ವಾಪಸ್ ವಿಚಾರಕ್ಕೆ ಸಂಬಂಧಿಸಿ ಮುಡಾ ಆಯುಕ್ತರಿಗೆ ಬರೆದ ಪತ್ರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಿದ್ದರಾಮಯ್ಯ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗುಡುಗಿದ್ದಾರೆ.
ಮೆಟ್ರೋ ಪ್ರಯಾಣಿಕರೇ ಈ ದಿನ ರೈಲು ಸೇವೆ ಇರಲ್ಲ: ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!?
ಇದೇ ವಿಚಾರವಾಗಿ ಮಾತನಾಡಿದ ಮಧು ಬಂಗಾರಪ್ಪ, ವಿಜಯೇಂದ್ರಗೆ ಉತ್ತರ ಕೊಡುವುದಕ್ಕಾ ನಾನು ಇರುವುದು. ಸಿಎಂ ರಾಜೀನಾಮೆ ಕೊಡ್ತಾರೆ ಅಂತ ವಿಜಯೇಂದ್ರಗೆ ಹೇಳಿದ್ರಾ? ಅವರೇನೋ ಹುಚ್ಚರ ತರ ಹೇಳಿದ್ರೆ, ನನಗೇನು ತಲೆ ಕೆಟ್ಟಿದ್ದೀಯಾ ಅವರಿಗೆ ಉತ್ತರ ಕೊಡುವುದಕ್ಕೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುವುದು ಬೇರೆ. ಕೊಡ್ತಾರೆ ಅನ್ನುವುದು ಬೇರೆ. ಅದು ಸಿಎಂ ಅವರ ನಿರ್ಧಾರಕ್ಕೆ ಬಿಟ್ಟಿದ್ದು, ಈ ಪ್ರಕರಣವನ್ನು ಕೆಟ್ಟ ರೀತಿಯಲ್ಲಿ ತೆಗೆದುಕೊಂಡು ಹೋಗಿರುವುದು ಅವರ ಮನಸ್ಸಿಗೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಸಿಎಂ ಪತ್ನಿ ಮಾಡಿದ್ದಾರೆ. ನಿವೇಶನ ಹಿಂದಿರುಗಿಸಲು ಕಾರಣವೇನೆಂದರೆ ಬಿಜೆಪಿ ಅವರ ಮಾನಸಿಕ ಚಿತ್ರ ಹಿಂಸೆಯೇ ಕಾರಣ. ಈ ಪ್ರಕರಣದ ಹಿನ್ನೆಲೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ. ಕೇಸು ಅದರ ಪಾಡಿಗೆ ನಡೆಯುತ್ತದೆ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದು ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು.
ಇನ್ನೂ ಕಾನೂನು ಎಲ್ಲರಿಗೂ ಒಂದೇ. ಎಲ್ಲೂ ಕೂಡ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಕಾನೂನು ಹೇಳಿಲ್ಲ. ಇಲ್ಲಿ ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಬರಲ್ಲ. ಇದೀಗ ಈ ಪ್ರಕರಣ ಇಡಿಗೆ ಹೋಗಿದೆ. ಎಲ್ಲಿಗೆ ಬೇಕಾದರೂ ಹೋಗಲಿ ಡಿಫೆನ್ಸ್ ಎನ್ನುವುದೊಂದು ಇರುತ್ತಲ್ಲ. ನಮ್ಮ ಪರವಾಗಿ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.