ಅಪ್ಪ ಎನ್ನುವ ಪದ ಪ್ರತಿಯೊಬ್ಬರ ಜೀವನದಲ್ಲೂ ಒಂದು ಮಹತ್ತರದ ಸ್ಥಾನವನ್ನು ಪಡೆದುಕೊಂಡಿದೆ. ಅಪ್ಪ ಎಂದರೆ ಪ್ರೀತಿ, ವಾತ್ಸಲ್ಯದಿಂದ ಕೂಡಿದ ಜೀವ. ಪ್ರತಿಯೊಬ್ಬರಿಗೂ ಅವರವರ ಅಪ್ಪನ ಮೇಲೆ ಬೆಟ್ಟದಷ್ಟು ಪ್ರೀತಿ ಇರುತ್ತದೆ. ತಮ್ಮ ಮಕ್ಕಳು ಎಷ್ಟೇ ದೊಡ್ಡವರಾದರೂ ಅಪ್ಪಂದಿರಿಗೆ ತಮ್ಮ ಮಕ್ಕಳು ಎಂದಿಗೂ ಪುಟ್ಟ ಮಗುವೇ. ಇದೇ ರೀತಿ ಸೋಶಿಯಲ್ ಮೀಡಿಯಾ ದಲ್ಲಿ ಈಗ ಅಪ್ಪನ ವಿಡಿಯೋ ಒಂದು ವೈರಲ್ ಆಗಿದೆ. ಮಗನಿಗೆ ಐಫೋನ್ 16 ಕೊಡಿಸಿರುವ ಆತ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯಲ್ಲ. ದೊಡ್ಡ ಬ್ಯುಸಿನೆಸ್ ಮಾಡ್ತಿಲ್ಲ. ಸ್ಕ್ರ್ಯಾಪ್ ಕೆಲಸ ಮಾಡ್ತಿರುವ ಈ ತಂದೆ, ಮಗನಿಗಾಗಿ ತನ್ನೆಲ್ಲ ದುಡಿಮೆ ಹಣವನ್ನು ಮೀಸಲಿಟ್ಟಂತಿದೆ.
ಇಲ್ಲೊಬ್ರು ಬಡ ತಂದೆ ತಮ್ಮ ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದನೆಂಬ ಹೆಮ್ಮೆ ಮತ್ತು ಖುಷಿಗೆ ಆತನಿಗೆ 1.80 ಲಕ್ಷ ಬೆಲೆಯ ಐಫೋನ್ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಗುಜರಿ ಪ್ಯಾಪಾರಿಯಾಗಿ ಕೆಲಸ ಮಾಡಿ ಜೀವನ ನಡೆಸುವ ಬಡ ವ್ಯಕ್ತಿಯೊಬ್ಬರು ತನ್ನ ಮಗ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿ ಪಾಸ್ ಆಗಿದ್ದಾನೆ ಎಂಬ ಖುಷಿಗೆ ಆತನಿಗೆ 1.80 ಲಕ್ಷ ಬೆಲೆಯ ದುಬಾರಿ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ.
ನಿಮಗೆ ಗೊತ್ತೆ..? ಇದೇ ಕಾರಣಕ್ಕೆ ಮಹಿಳೆಯರಲ್ಲಿ “ಸೆಕ್ಸ್” ವೇಳೆ ನೋವು ಕಾಣಿಸಿಕೊಳ್ಳುವುದು!
ಈ ಬಡ ತಂದೆಯ ಆಸೆಯಂತೆ ಮಗ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್ ಆಗಿದ್ದು, ಇದಕ್ಕೆ ಪ್ರತಿಯಾಗಿ ಮಗನಿಗೆ ಏನಾದ್ರೂ ಉಡುಗೊರೆ ನೀಡ್ಬೇಕಲ್ವಾ ಎಂದು ಐಫೋನ್ ಗಿಫ್ಟ್ ನೀಡಿದ್ದಾರೆ. ಹೌದು ತನಗಾಗಿ 85 ಸಾವಿರ ಮೌಲ್ಯದ ಐಪೋನ್ ಮತ್ತು ಮಗನಿಗಾಗಿ 1.80 ಲಕ್ಷದ ಐಫೋನ್ ಖರೀದಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಡ ವ್ಯಕ್ತಿಯೊಬ್ಬರು ಯುವಕರು ಕೇಳಿದ್ದಕ್ಕೆ ತಮ್ಮ ಬಳಿ ಇದ್ದ ಐಫೋನ್ ತೋರಿಸುತ್ತಿರುವ ದೃಶ್ಯವನ್ನು ಕಾಣಬಹುದು. ನಾನು ಗುಜರಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದು, ನನ್ನ ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕಾಗಿ ಅವನಿಗೆ 1.80 ಲಕ್ಷ ಮೌಲ್ಯದ ಐಫೋನ್ 16 ಫೋನ್ ಉಡುಗೊರೆಯಾಗಿ ನೀಡಿದ್ದೇನೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.