ಬೆಂಗಳೂರು:- ತಮ್ಮನ್ನು ಹಂದಿಗೆ ಹೋಲಿಸಿದ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾಗೆ ಹೆಚ್ಡಿಕೆ ಪತ್ರ ಬರೆದಿದ್ದಾರೆ.
ಬಂಡತನ ಇದ್ರೆ ಏನು ಮಾಡೋದಿಕ್ಕೆ ಆಗತ್ತೆ: ಸಂಸದ ಶೆಟ್ಟರ್ ಹೀಗೆ ಹೇಳಿದ್ಯಾರಿಗೆ!?
ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ್ ಸೇವಾ ನಿಯಮ ಉಲ್ಲಂಘಿಸಿದ್ದಾರೋ ಎಂದು ಪರಿಶೀಲಿಸಬೇಕು. ಚಂದ್ರಶೇಖರ್ ವಂಚನೆಗಳ ಬಗ್ಗೆ ಸ್ವತಂತ್ರ ಇಲಾಖಾ ತನಿಖೆ ನಡೆಸಬೇಕು. ಕರ್ನಾಟಕ ಕೇಡರ್ ಅಲ್ಲದಿದ್ದರೂ ಇಲ್ಲಿ ಇರಲು ನಿಯಮ ಉಲ್ಲಂಘಿಸಿದ್ದಾರೆಯೇ ಎಂದು ಕೂಡ ಪರಿಶೀಲಿಸಬೇಕಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸ್ವತಂತ್ರ ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಚುನಾವಣಾ ಬಾಂಡ್ ವಿಚಾರವಾಗಿ ಎಫ್ಐಆರ್ ದಾಖಲಾದ ಬಗ್ಗೆಯೂ ಪ್ರಸ್ತಾಪಿಸಿದ್ದು, ಪೊಲೀಸ್ ಅಧಿಕಾರಿಗಳು, ಕಾಂಗ್ರೆಸ್ ನಾಯಕರ ನಡುವಿನ ಸಂಬಂಧದ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ.
ಚಂದ್ರಶೇಖರ್ ಯಾವ ಕಚೇರಿಯಲ್ಲಿ ಕೂತು ಲೆಟರ್ ಬರೆದರೂ, ಕೆಪಿಸಿಸಿ ಕಚೇರಿಯಿಂದಲೇ ಕೂತು ಬರೆದ್ರೋ, ಎಲ್ಲವೂ ನನಗೆ ಗೊತ್ತಿದೆ ಅಂತಾ ಕುಮಾರಸ್ವಾಮಿ ಬಾಂಬ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿಗೂ? ಚಂದ್ರಶೇಖರ್ಗೂ ಏನ್ ಸಂಬಂಧ ಅಂತಾ ತಿರುಗೇಟು ನೀಡಿದ್ದರು.