ಇಸ್ರೋದ ಮಹತ್ವಾಕಾಂಕ್ಷೆಯ ‘ವೀನಸ್ ಆರ್ಬಿಟರ್ ಮಿಷನ್’ಗೆ ಅಧಿಕೃತವಾಗಿ ಸ್ವೀಡನ್ ಸೇರಿದೆ. ಕಳೆದ ವಾರ ಕೇಂದ್ರ ಸಚಿವ ಸಂಪುಟ ಈ ಕಾರ್ಯಾಚರಣೆಗೆ ಅನುಮೋದನೆ ನೀಡಿತ್ತು. ಸ್ವೀಡಿಷ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಫಿಸಿಕ್ಸ್ ಇಸ್ರೋಗೆ ವೀನಸ್ ನ್ಯೂಟ್ರಲ್ಸ್ ವಿಶ್ಲೇಷಕ ಉಪಕರಣಗಳನ್ನು ಒದಗಿಸಲಿದೆ ಎಂದು ವರದಿಯಾಗಿದೆ.
ನ್ಯೂಟ್ರಲ್ಸ್ ವಿಶ್ಲೇಷಕ ಉಪಕರಣಗಳು ಹಗುರವಾದ, ಕಡಿಮೆ–ಶಕ್ತಿ ಹೊಂದಿವೆ. ಆದರೆ ಹೆಚ್ಚು ಸಾಮರ್ಥ್ಯದ ಎನರ್ಜಿಟಿಕ್ ನ್ಯೂಟ್ರಲ್ ಆಯ್ಟಮ್ ವಿಶ್ಲೇಷಕವಾಗಿದೆ. ಸೂರ್ಯ ಮತ್ತು ಶುಕ್ರನ ವಾತಾವರಣ ಮತ್ತು ಎಕ್ಸೋಸ್ಪಿಯರ್ನಿಂದ ಬರುವ ಚಾರ್ಜ್ಡ್ ಕಣಗಳ ನಡುವಿನ ಪರಸ್ಪರ ಕ್ರಿಯೆಯನ್ನು VNA ಅಧ್ಯಯನ ಮಾಡುತ್ತದೆ.
ಶುಕ್ರದ ವಾತಾವರಣ ಮತ್ತು ಭೂವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಯೋಜನೆ ಸಹಾಯ ಮಾಡುತ್ತದೆ. ಮತ್ತು ಅದರ ದಟ್ಟ ವಾತಾವರಣವನ್ನು ತನಿಖೆ ಮಾಡುವ ಮೂಲಕ ಹೆಚ್ಚಿನ ಪ್ರಮಾಣದ ವೈಜ್ಞಾನಿಕ ಡೇಟಾ ಸಂಗ್ರಹಿಸುತ್ತದೆ. VOMಗಾಗಿ ಕೇಂದ್ರ ಸರ್ಕಾರ 1,236 ಕೋಟಿ ರೂಪಾಯಿ ನಿಧಿ ಮೀಸಲಿರಿಸಿದೆ. ಇದರಲ್ಲಿ 824 ಕೋಟಿ ರೂಪಾಯಿಯನ್ನು ಬಾಹ್ಯಾಕಾಶ ನೌಕೆಗಾಗಿ ಖರ್ಚು ಮಾಡಲಾಗುತ್ತದೆ. IRF 2004ದಿಂದ 2014ರವರೆಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ವೀನಸ್ ಎಕ್ಸ್ಪ್ರೆಸ್ ಮಿಷನ್ನಲ್ಲಿ ಪ್ಲಾಸ್ಮಾ ಪ್ಯಾಕೇಜ್ನ ಪ್ರಧಾನ ತನಿಖಾಧಿಕಾರಿಯಾಗಿತ್ತು.
VOM ಮಿಷನ್ ಸ್ವೀಡನ್ನ ಎರಡನೇ ಶುಕ್ರ ಪರಿಶೋಧನೆಯಾಗಿದೆ. ಸ್ವೀಡನ್ 1986ರಿಂದ ಭಾರತದ ಬಾಹ್ಯಾಕಾಶ ಪಾಲುದಾರನಾಗಿದೆ. ಇದು ಚಂದ್ರಯಾನ ಮಿಷನ್ 1, 2 ಮತ್ತು 3 ರಲ್ಲಿ ಇಸ್ರೋ ಜೊತೆ ಸಹಭಾಗಿತ್ವ ಹೊಂದಿದೆ. ಚಂದ್ರಯಾನ-4 ಮತ್ತು ಭಾರತದ ಮಾನವ ಬಾಹ್ಯಾಕಾಶಯಾನ ಮಿಷನ್ ಗಗನಯಾನ ಜೊತೆ ಪಾಲುದಾರಿಕೆ ಮಾಡುವ ಗುರಿ ಹೊಂದಿದೆ.