ನೆಲಮಂಗಲ: ರೈತ ಭೂಮಿಯಲ್ಲಿ ಕೃಷಿ ಜೊತೆಗೆ ಜಾನುವಾರುಗಳ ಸಾಕಾಣಿಕೆಯನ್ನ ಅವಲಂಬಿಸಿ ತನ್ನ ಕುಟುಂಬವನ್ನ ನಿರ್ವಹಣೆ ಮಾಡುತ್ತಾರೆ. ಆದರೆ ಕಳೆದ ರಾತ್ರಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ವೇಳೆ ಕಳ್ಳರು 2 ಹಸು ಒಂದು ಕರುವನ್ನ ಯಾರಿಗೂ ಅನುಮಾನ ಬಾರದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಹಸುಗಳನ್ನು ಕಳೆದುಕೊಂಡ ರೈತ ತಿಮ್ಮಪ್ಪಯ್ಯ ಕಣ್ಣೀರು ಹಾಕಿದ್ದು ಈ ಬಡ ರೈತನ ಮನೆಗೆ ಆಶ್ರಯವಾಗಿದ್ದು ಹಸುಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದು ರೈತ ಕುಟುಂಬ ಕಂಗಾಲಾಗಿದ್ದಾರೆ.
Health Tips: ಕೆಂಪು ಸೇಬಿಗಿಂತ ಹಸಿರು ಸೇಬು ಹೆಚ್ಚು ಆರೋಗ್ಯಕರವಂತೆ! ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ನೆಲಮಂಗಲ ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಹಸುಗಳ ಕಳ್ಳತನ ಪ್ರಕರಣದಿಂದ ರೈತರು ಬೇಸತ್ತಿದ್ದು, ಬೆಲೆ ಬಾಳುವ ರಾಸುಗಳು, ಜಾನುವಾರುಗಳು ಕಳ್ಳರ ಟಾರ್ಗೆಟ್ ಆಗಿದೆ. ಇನ್ನೂ ಈ ರೈತ ಜಾನುವಾರುಗಳಿಂದ ಹಾಲು ಕೊಡುತ್ತಿದ್ದ ಹಸುಗಳ ಜೊತೆ ಕರುಗಳನ್ನು ಸಹ ಕಳ್ಳತನ ಮಾಡಿದ್ದು ಆತಂಕಕ್ಕೆ ಕಾರಣವಾಗಿದ್ದು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಕಳ್ಳರ ಪತ್ತೆಗೆ ಆಗ್ರಹಿಸಿದ್ದಾರೆ.