ನೆಲಮಂಗಲ: ರಾತ್ರೋ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ಲಕ್ಷ ಬೆಲೆ ಬಾಳುವ ಹಸುಗಳ ಕಳ್ಳತನ ನಡೆದಿರುವ ಘಟನೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮದಲ್ಲಿ ಜರುಗಿದೆ.
Darshan: ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ; 100 ದಿನಗಳ ನಂತರವಾದ್ರೂ ಸಿಗುತ್ತಾ ಜಾಮೀನು!?
ರೈತನ ಮನೆಯಲ್ಲೇ, ಆಶ್ರಯವಾಗಿದ್ದು ಹಸುಗಳ ಕದ್ದು ಖದೀಮರು ಪರಾರಿಯಾಗಿದ್ದಾರೆ. ಇನ್ನೂ ನೆಲಮಂಗಲ ತಾಲೂಕಿನಲ್ಲಿ ಹಸುಗಳ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಹಸುಗಳ ಕಳೆದುಕೊಂಡ ರೈತ ತಿಮ್ಮಪ್ಪಯ್ಯ ಕಣ್ಣೀರು ಹಾಕಿದ್ದಾನೆ. ಹಾಲು ಕೊಡುತ್ತಿದ್ದ ಹಸುಗಳ ಜೊತೆ ಕರುಗಳನ್ನು ಸಹ ಕಳ್ಳತನ ಮಾಡಲಾಗಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.