ಯುಎಸ್ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಪ್ರಕಟಿಸಿದ ಸಂಶೋಧನೆಯಲ್ಲಿ ಕಿವಿ ನೋವು ಕೂಡ ಹೃದಯಾಘಾತದ ‘ಮೂಕ’ ಲಕ್ಷಣವಾಗಿರಬಹುದು ಎಂದು ತಿಳಿದು ಬಂದಿದೆ.
ಕುಮಾರಸ್ವಾಮಿಯನ್ನ ADGP ಹಂದಿ ಎಂದು ಕರೆದಿಲ್ಲ, ಇಂಗ್ಲೀಷ್ ಪದ ಬಳಸಿದ್ದಾರಷ್ಟೆ- ಸಿದ್ದರಾಮಯ್ಯ
ಸಂಶೋಧನೆಯ ಪ್ರಕಾರ, ಹೃದಯಾಘಾತದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯು ಹೃದಯದ ರಕ್ತನಾಳಗಳನ್ನು ತಡೆಯುತ್ತದೆ, ಆದರೆ ಈ ಗೆಡ್ಡೆಯು ಕಿವಿಯ ರಕ್ತನಾಳಗಳನ್ನು ಸಹ ತಲುಪಬಹುದು. ಇದು ಕಿವಿ ನೋವು, ಭಾರ ಅಥವಾ ಶ್ರವಣ ನಷ್ಟದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
500 ರೋಗಿಗಳ ಮೇಲೆ ಸಂಶೋಧನೆ : ಸಂಶೋಧಕರು 500 ಕ್ಕೂ ಹೆಚ್ಚು ಹೃದ್ರೋಗಿಗಳನ್ನು ಅಧ್ಯಯನ ಮಾಡಿದರು. ಹೃದಯಾಘಾತಕ್ಕೆ ಒಳಗಾದವರಲ್ಲಿ 12% ರಷ್ಟು ಜನರಿಗೆ ಕಿವಿ ಸಮಸ್ಯೆಗಳಿವೆ ಎಂದು ಕಂಡು ಬಂತು. ಅವರಲ್ಲಿ ಹಲವರು ಕಿವಿ ನೋವನ್ನು ಅನುಭವಿಸಿದರೆ, ಕೆಲವರು ಕಿವಿಯ ಭಾರ ಅಥವಾ ಶ್ರವಣ ನಷ್ಟದ ಸಮಸ್ಯೆಗಳನ್ನು ಹೊಂದಿದ್ದರು
ತಜ್ಞರ ಪ್ರಕಾರ : ಈ ಸಂಶೋಧನೆಯ ಮುಖ್ಯ ಸಂಶೋಧಕರು ಡಾ. ಡೇವಿಡ್ ಮಿಲ್ಲರ್ ಪ್ರಕಾರ, ಕಿವಿ ನೋವು ಅಥವಾ ಶ್ರವಣ ನಷ್ಟ ಹೃದಯಾಘಾತದ ಸಂಭವನೀಯ ಲಕ್ಷಣವಾಗಿರಬಹುದು ಎಂದು ವಿವರಿಸಿದರು. ಈ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ ಎಂದರು.. ಅಲ್ಲದೆ, ಕಿವಿ ನೋವು ಸಾಮಾನ್ಯ ಅಂತ ಭಾವಿಸಿ ಸುಮ್ಮನೆ ಕೂರಬೇಡಿ.. ನಿಜವಾದ ಕಾರಣವನ್ನು ತಿಳಿಯಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ ಎಂದು ಹೇಳಿದ್ದಾರೆ..