ತಿರುಮಲ:– ತಿಮ್ಮಪ್ಪನ ದರ್ಶನಕ್ಕಾಗಿ ಬೆಟ್ಟ ಹತ್ತಿ ಹೋಗುವ ದಾರಿಯಲ್ಲೇ ಚಿರತೆ ಪ್ರತ್ಯಕ್ಷವಾಗಿದ್ದು ಎಲ್ಲರೂ ಭಯ ಭೀತಿಗೊಂಡಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಾದ ವಿಚಾರ: ಪ್ರಿಯಾಂಕ್ ಖರ್ಗೆ ಹೇಳಿದ್ದೇನು!?
ತಿರುಮಲ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಅದರ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಆತಂಕಕಾರಿ ವಿಚಾರ ಏನಂದ್ರೆ ತಿರುಮಲ ಬೆಟ್ಟದಲ್ಲಿ ಪ್ರತಿನಿತ್ಯ ಭಕ್ತರು ಕಾಲ್ನಡಿಗೆಯಲ್ಲೇ ದೇವರ ದರ್ಶನಕ್ಕೆ ತೆರಳುತ್ತಾರೆ. ಭಕ್ತರು ತಿರುಪತಿ ಬೆಟ್ಟ ಹತ್ತುವ ಮಾರ್ಗ ಮಧ್ಯೆಯೇ ಈ ಚಿರತೆ ಪ್ರತ್ಯಕ್ಷವಾಗಿದೆ.
ತಿರುಮಲ ಬೆಟ್ಟದಲ್ಲಿ ಸದ್ದು ಮಾಡಿದ ಚಿರತೆ ಬೀದಿ ನಾಯಿಗಳ ಮೇಲೆ ದಾಳಿ ಮಾಡಿದೆ. ಈ ದೃಶ್ಯ ನೋಡಿದ ಭದ್ರತಾ ಸಿಬ್ಬಂದಿ ಕೂಡ ಫುಲ್ ಗಾಬರಿಯಾಗಿದ್ದಾರೆ. ಚಿರತೆ ನೋಡಿದ ಸೆಕ್ಯೂರಿಟಿ ಗಾರ್ಡ್ ಕೂಡಲೇ ಕಂಟ್ರೋಲ್ ರೂಮ್ಗೆ ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಇದಾದ ನಂತರ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾತ್ರೋರಾತ್ರಿ ಚಿರತೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.