ಉತ್ತರ ಪ್ರದೇಶ:- ಇಲ್ಲಿನ ಹಾಪುರ್ ಜಿಲ್ಲೆಯ ಮನೆಯೊಂದರಲ್ಲಿ ತಾಯಿ,ಮಗಳು ಶವವಾಗಿ ಪತ್ತೆಯಾಗಿರುವ ಘಟನೆ ಜರುಗಿದೆ.
ಯಾವುದೇ ಹಗರಣದ ತನಿಖೆಯನ್ನ ಕೋರ್ಟ್ ನಿರ್ದೇಶನ ಮೇಲೆ ಸಿಬಿಐಗೆ ಕೊಡಲೇಬೇಕು- ಜಗದೀಶ್ ಶೆಟ್ಟರ್
ಮನೆಯಲ್ಲಿ ದರೋಡೆ ಯತ್ನದ ಸಂದರ್ಭದಲ್ಲಿ ಅವರನ್ನು ಹತ್ಯೆಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆಗೀಡಾದವರನ್ನು ಹಾಪುರದ ಖಿಚಾರ ಗ್ರಾಮದ ಕೌಸರ್ ಜಹಾನ್ (60) ಮತ್ತು ಖುಷ್ಬೂ (25) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಬಾಗಿಲು ಒಡೆದು ನೋಡಿದಾಗ ಒಳಗಿದ್ದ ಶವಗಳು ಪತ್ತೆಯಾಗಿವೆ.
ಹಾಪುರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನೀತ್ ಭಟ್ನಾಗರ್ ಅವರು ನಾಲ್ಕೈದು ದಿನಗಳ ಹಿಂದೆ ಕತ್ತು ಹಿಸುಕಿ ಇಬ್ಬರನ್ನೂ ಕೊಂದಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕೌಸರ್ ಅವರ ಪತಿ ತೀರಿಕೊಂಡಿದ್ದು, ಕೌಸರ್ ಮತ್ತು ಖುಷ್ಬೂ ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.