ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ವೇಗದ ಬೌಲರ್ ಮಯಾಂಕ್ ಯಾದವ್ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
Condoms: ಸೆಕ್ಸ್ ಎಂಜಾಯ್ ಮಾಡಲು ಕಾಂಡೋಮ್ ಆಯ್ಕೆ ಹೇಗಿರಬೇಕು ಗೊತ್ತಾ..?
ಈ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 6 ರಂದು ನಡೆಯಲ್ಲಿದ್ದು, ಇದೀಗ ಬಿಸಿಸಿಐ ಈ ಸರಣಿಗೆ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ.
ಇಬ್ಬರು ಆಟಗಾರರು ಇದೇ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರೆ, ಒಬ್ಬ ಬೌಲರ್ 3 ವರ್ಷಗಳ ನಂತರ ತಂಡದಕ್ಕೆ ಮರಳಿದ್ದಾರೆ. ಆದರೆ, ಎಲ್ಲಾ ಊಹಾಪೋಹಗಳು ಮತ್ತು ನಿರೀಕ್ಷೆಗಳ ನಡುವೆಯೂ ಸ್ಟಾರ್ ವಿಕೆಟ್ ಕೀಪರ್ ಇಶಾನ್ ಕಿಶನ್ ಆಯ್ಕೆಗಾರರ ಮನಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ತಂಡಕ್ಕೆ ಆಯ್ಕೆಯಾಗಿರುವ ಎರಡು ಹೊಸ ಮುಖಗಳಲ್ಲಿ ಇಬ್ಬರು ಕೂಡ ಐಪಿಎಲ್ ಸ್ಟಾರ್ಗಳೆ ಆಗಿದ್ದಾರೆ. ಅದರಲ್ಲಿ ಒಬ್ಬರು ಐಪಿಎಲ್ನಲ್ಲಿ ಲಕ್ನೋ ಪರ ಬೌಲಿಂಗ್ನಲ್ಲಿ ಬೆಂಕಿ ಉಂಡೆಗಳನ್ನು ಉಗುಳಿದ್ದ ಯುವ ವೇಗಿ ಮಯಾಂಕ್ ಯಾದವ್ ಸೇರಿದ್ದರೆ, ಇನ್ನೊಬ್ಬರು ಸನ್ರೈಸರ್ಸ್ ಹೈದರಾಬಾದ್ ಪರ ತಮ್ಮ ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದಿದ್ದ ನಿತೀಶ್ ಕುಮಾರ್ ರೆಡ್ಡಿ ಆಗಿದ್ದಾರೆ. ಈ ಇಬ್ಬರು ಆಟಗಾರರು ಪ್ಲೇಯಿಂಗ್ ಇಲೆವೆನ್ನಲ್ಲಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಇದೇ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಆಡಲಿದ್ದಾರೆ.
ಈ ಹಿಂದೆ ಕೇಳಿಬಂದ ಊಹಪೋಹಗಳು ನಿಜವಾಗಿದ್ದು, ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ರಿಷಬ್ ಪಂತ್ಗೆ ವಿಶ್ರಾಂತಿ ನೀಡಲಾಗಿದೆ. ಇದಕ್ಕೆ ಕಾರಣವೂ ಇದ್ದು ಈ ಸರಣಿಯ ನಂತರ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗಳನ್ನು ಆಡಬೇಕಿದೆ. ಹೀಗಾಗಿ ಕೆಲಸದ ಹೊರೆ ನಿರ್ವಹಣೆಗಾಗಿ ಪಂತ್ಗೆ ವಿಶ್ರಾಂತಿ ನೀಡಲಾಗಿದೆ. ಅವರ ಜಾಗದಲ್ಲಿ ಜಿತೇಶ್ ಶರ್ಮಾ ಎರಡನೇ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.