ಹಿಂದೂಪರ ಸಂಘಟನೆಗಳಲ್ಲಿ ಭಾಷಣಕಾರಳಾಗಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು ಮೂರನೇ ಸ್ಪರ್ಧಿಯಾಗಿ ಬಿಗ್ಬಾಸ್ ಸ್ಪರ್ಧಿಯಾಗಿ ಮನೆಗೆ ಕಳಿಸಲಾಗುತ್ತಿದೆ. ಚೈತ್ರಾ ಕುಂದಾಪುರ ಹಿಂದೂಪರ ಸಂಘಟನೆ, ಹೋರಾಟಗಳಿಂದ ಗುರುತು ಪಡೆದುಕೊಂಡಿದ್ದಾರೆ. ಹಿಂದೂಪರ ಭಾಷಣಗಳು, ಕೆಲವು ಸಂದರ್ಭದಲ್ಲಿ ದ್ವೇಷ ಭಾಷಣಗಳನ್ನು ಮಾಡಿದ ಆರೋಪವೂ ಚೈತ್ರಾ ಮೇಲಿದೆ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಬಿಜೆಪಿಯ ಕೆಲ ಶಾಸಕರು, ಸಂಸದರಿಂದ ಭಾರಿ ಮೊತ್ತದ ಹಣ ವಂಚನೆ ಮಾಡಿದ ಆರೋಪದಲ್ಲಿ ಜೈಲು ಪಾಲಾದರು.
Kolara: ಮನೆ ಮನೆಯಲ್ಲಿ ಕನ್ನಡ ಸಂಭ್ರಮ, ಶಿಕ್ಷಕರಿಗೆ ಸನ್ಮಾನ ಸಮಾರಂಭ!
ಟಿಕೆಟ್ ಕೊಡಿಸುವ ಆಮೀಷಗಳನ್ನು ಒಡ್ಡಿ ಕೆಲವು ಬಿಜೆಪಿ ಮುಖಂಡರಿಂದ ಭಾರಿ ಮೊತ್ತದ ಹಣವನ್ನು ಚೈತ್ರಾ ಕುಂದಾಪುರ ಹಾಗೂ ಅವರ ಸಂಗಡಿಗರು ತೆಗೆದುಕೊಂಡಿದ್ದಾರೆಂದು ಆರೋಪ ಮಾಡಲಾಯ್ತು, ಪ್ರಕರಣ ದಾಖಲಾಗಿ ಚೈತ್ರಾ ಕುಂದಾಪುರ ಹಾಗೂ ಇನ್ನಿತರರು ಜೈಲು ಪಾಲಾದರು. ಪ್ರಸ್ತುತ ಚೈತ್ರಾ ಕುಂದಾಪುರ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಚೈತ್ರಾ ಕುಂದಾಪುರ ಜೈಲಿನಿಂದ ಹೊರಬಂದ ಬಳಿಕ ಯಾವುದೇ ಹೋರಾಟಗಳಲ್ಲಿ ಗುರುತಿಸಿಕೊಂಡಿಲ್ಲ. ಇದೀಗ ಏಕಾಏಕಿ ಬಿಗ್ಬಾಸ್ ಮನೆಗೆ ಹೋಗುತ್ತಿದ್ದಾರೆ.
ಹಾಲು ಮಾರುವವರ ಮಗಳಾಗಿ ಹುಟ್ಟಿಯೂ ನಾನು ಈ ಹಂತಕ್ಕೆ ಬೆಳೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಚೈತ್ರಾ ಕುಂದಾಪುರ, ಆ ಕೋರ್ಟ್ ಕೇಸು ನನ್ನನ್ನು ಕುಗ್ಗಿಸಿಲ್ಲ ಎಂದು ಹೇಳುತ್ತಾ ಆತ್ಮವಿಶ್ವಾಸದಿಂದಲೇ ಬಿಗ್ಬಾಸ್ ಮನೆಗೆ ಕಾಲಿಡಲು ರೆಡಿಯಾಗಿದ್ದಾರೆ.