ಕೋಲಾರ: ತಾಲ್ಲೂಕು ಮಟ್ಟದ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳವನ್ನು ನಡೆಸಲು ಸಂಪೂರ್ಣ ಸಹಕಾರವನ್ನು ನೀಡಲಾಗುತ್ತದೆ ಎಂದು ವಾರಿಧಿ ಗ್ರೂಪ್ಸ್ ಅಧ್ಯಕ್ಷ ವಾರಿಧಿ ಎಂ.ಎಸ್. ಮಂಜುನಾಥ್ ರೆಡ್ಡಿ ಭರವಸೆ ನೀಡಿದರು. ನಗರದ ಟೀಚರ್ಸ್ ಕಾಲೋನಿಯ ಶಿಕ್ಷಕಿ ಶ್ವೇತ ಅವರ ನಿವಾಸದಲ್ಲಿ ಚುಸಾಪ ವತಿಯಿಂದ ಹಮ್ಮಿಕೊಂಡ ಮನೆ ಮನೆಯಲ್ಲಿ ಕನ್ನಡ ಸಂಭ್ರಮ ಹಾಗೂ ವಿವಿಧ ಪ್ರಶಸ್ತಿಗಳನ್ನು ಪಡೆದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯದಲ್ಲಿ ಚುಟುಕು ಕೂಡ ತನ್ನದೆ ಆದ ಪ್ರಾಮುಖ್ಯತೆ ಹಾಗೂ ಮಹತ್ವವನ್ನು ಪಡೆದಿದೆ. ಆದ ಕಾರಣದಿಂದ ಚುಟುಕು ಸಾಹಿತಿಗಳಿಗೆ ಸೂಕ್ತವಾದ ವೇದಿಕೆಯನ್ನು ಸೃಷ್ಟಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು. ಸಾಹಿತ್ಯ ನಮ್ಮ ಜೀವನದಲ್ಲಿ ಒಂದು ಅಂಶವಾಗಿದ್ದು, ಇದರಿಂದ ನಮ್ಮ ಜೀವನದ ಉತ್ತಮವಾದ ಹಾದಿಯನ್ನು ಕಂಡುಕೊಳ್ಳಲು ಅನುಕೂಲ ಆಗುತ್ತದೆ. ಇದರಿಂದಾಗಿ ಸಾಹಿತಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದರ ಜೊತೆಗೆ ಎಲೆಮರಿ ಕಾಯಿಯಂತೆ ಇರುವ ಯುವ ಕವಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ ಎಂದರು.